ನವದೆಹಲಿ: ಕಾನೂನು ನೆರವನ್ನು ಉಚಿತವಾಗಿ ಪಡೆಯುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು. ಬಡವರು ಎಂಬ ಕಾರಣಕ್ಕೆ, ಅವರಿಗೆ ಒದಗಿಸುವ ಕಾನೂನು ನೆರವು ಕಡಿಮೆ ಗುಣಮಟ್ಟದ್ದಾಗಿ ಇರಕೂಡದು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
0
samarasasudhi
ಅಕ್ಟೋಬರ್ 24, 2024
ನವದೆಹಲಿ: ಕಾನೂನು ನೆರವನ್ನು ಉಚಿತವಾಗಿ ಪಡೆಯುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು. ಬಡವರು ಎಂಬ ಕಾರಣಕ್ಕೆ, ಅವರಿಗೆ ಒದಗಿಸುವ ಕಾನೂನು ನೆರವು ಕಡಿಮೆ ಗುಣಮಟ್ಟದ್ದಾಗಿ ಇರಕೂಡದು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಕೈದಿಗೂ ಕೂಡ ಕಾನೂನು ನೆರವು ಪಡೆಯುವ ಮೂಲಭೂತ ಹಕ್ಕಿದೆ.
ಸಾಮಾಜಿಕ ಕಾರ್ಯಕರ್ತ ಸುಹಾಸ್ ಚಕ್ಮಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ವೇಳೆ, ನ್ಯಾಯಪೀಠ ಈ ಮಾತು ಹೇಳಿದೆ.
ವಿಚಾರಣಾ ಕೈದಿಗಳು ಅಥವಾ ಅಪರಾಧಿಗಳು ಇರಲಿ ಎಲ್ಲ ಕೈದಿಗಳಿಗೆ ಉಚಿತ ಕಾನೂನು ನೆರವು ಸಿಗುವಂತಾಗಬೇಕು ಎಂದ ನ್ಯಾಯಪೀಠ, ಈ ಕುರಿತು ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯ್ದೆ-1987ರಡಿ ಹಲವು ನಿರ್ದೇಶನಗಳನ್ನು ನೀಡಿದೆ.
ನ್ಯಾಯಪೀಠ ಹೇಳಿದ್ದೇನು?
ವಿವಿಧ ಹಂತಗಳಲ್ಲಿ ಕಾನೂನು ನೆರವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದಕ್ಕಾಗಿ ಕಾನೂನು ಸೇವೆಗಳ ಪ್ರಾಧಿಕಾರಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಕಾರ ಮುಂದುವರಿಸಬೇಕು
ಪೊಲೀಸ್ ಠಾಣೆಗಳು ಅಂಚೆ ಕಚೇರಿಗಳು ಬಸ್ ಮತ್ತು ರೈಲು ನಿಲ್ದಾಣಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹತ್ತಿರದ ಕಾನೂನು ನೆರವು ಘಟಕ/ಕಚೇರಿಗಳ ವಿಳಾಸ ಸಂಪರ್ಕ ಸಂಖ್ಯೆ ಪ್ರದರ್ಶಿಸಬೇಕು
ಮಾಹಿತಿಯು ಸ್ಥಳೀಯ ಭಾಷೆ ಮತ್ತು ಇಂಗ್ಲಿಷ್‌ನಲ್ಲಿ ಇರಬೇಕು
ಕಾನೂನು ನೆರವು ಕುರಿತ ಮಾಹಿತಿ ಒಳಗೊಂಡ ಕಿರುಪುಸ್ತಕಗಳನ್ನು ಆಯಾ ರಾಜ್ಯಗಳ ಸ್ಥಳೀಯ ಭಾಷೆಗಳಲ್ಲಿ ಮುದ್ರಿಸಿ ವ್ಯಾಪಕ ಪ್ರಚಾರ ಮಾಡಬೇಕು
ಕಾನೂನು ಸೇವೆಗಳ ಪ್ರಾಧಿಕಾರಗಳಿಂದ ಸಿಗುವ ಪ್ರಯೋಜನ ಕುರಿತು ದೇಶದಾದ್ಯಂತ ಪ್ರಚಾರ ಕೈಗೊಳ್ಳಬೇಕು