HEALTH TIPS

ರಾಜಸ್ಥಾನದ ರಣಥಂಬೋರ್‌ ರಾಷ್ಟ್ರೀಯ ಉದ್ಯಾನದಿಂದ 25 ಹುಲಿಗಳು ನಾಪತ್ತೆ

         ಜೈಪುರ: ರಾಜಸ್ಥಾನದ ರಣಥಂಬೋರ್‌ ರಾಷ್ಟ್ರೀಯ ಉದ್ಯಾನದಲ್ಲಿನ (ಆರ್‌ಎನ್‌ಪಿ) 75 ಹುಲಿಗಳ ಪೈಕಿ 25 ಹುಲಿಗಳು ಕಳೆದ ಒಂದು ವರ್ಷ ಅವಧಿಯಲ್ಲಿ ಕಾಣೆಯಾಗಿದ್ದು, ಈ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಮುಖ್ಯ ವನ್ಯಜೀವಿ ಅಧಿಕಾರಿ ಪವನ್‌ಕುಮಾರ್ ಉಪಾಧ್ಯಾಯ ಹೇಳಿದ್ದಾರೆ.

       'ಇವುಗಳ ಪೈಕಿ, 11 ಹುಲಿಗಳು ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ನಾಪತ್ತೆಯಾಗಿವೆ' ಎಂದು ತನಿಖೆ ಕುರಿತು ಹೊರಡಿಸಿರುವ ಆದೇಶದಲ್ಲಿ ಪವನ್‌ಕುಮಾರ್‌ ಉಪಾಧ್ಯಾಯ ಹೇಳಿದ್ದಾರೆ.

         ವ್ಯಾಘ್ರಗಳನ್ನು ಪತ್ತೆ ಹಚ್ಚುವುದಕ್ಕಾಗಿ ವನ್ಯಜೀವಿ ಇಲಾಖೆಯು ಮೂವರು ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿಯು ದಾಖಲೆಗಳ ಪರಿಶೀಲನೆ ಜೊತೆಗೆ, ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕೈಗೊಳ್ಳಬೇಕಾದ ಕ್ರಮ ಕುರಿತು ಶಿಫಾರಸು ಮಾಡಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

           ಈ ವರ್ಷದ ಮೇ 17 ಮತ್ತು ಸೆಪ್ಟೆಂಬರ್ 30 ನಡುವೆ ನಾಪತ್ತೆಯಾಗಿರುವ ಹುಲಿಗಳ ಪತ್ತೆಗೆ ಮೊದಲು ಗಮನ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

           ಇದೇ ಮೊದಲ ಬಾರಿಗೆ, ಒಂದು ವರ್ಷದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಹುಲಿಗಳು ಅಧಿಕೃತವಾಗಿ ನಾಪತ್ತೆಯಾಗಿವೆ. ಈ ಹಿಂದೆ, ರಣಥಂಬೋರ್‌ ರಾಷ್ಟ್ರೀಯ ಉದ್ಯಾನದಲ್ಲಿ 2019 ರಿಂದ 2022ರ ವರೆಗೆ 13 ಹುಲಿಗಳು ನಾಪತ್ತೆಯಾಗಿದ್ದಾಗಿ ವರದಿಯಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries