ಕಾಸರಗೋಡು: ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿ ಆಯೋಜಿಸಿರುವ 29ನೇ ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಂಬಂಧಿಸಿದಂತೆ ಟೂರಿಂಗ್ ಟಾಕೀಸ್ ಡಂಗುರ ಜಾಥಾ ಕಯ್ಯೂರಿನಲ್ಲಿ ಆರಂಭಗೊಂಡಿತು. ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ತೃಕ್ಕರಿಪುರ ಶಾಸಕ ಎಂ ರಾಜಗೋಪಾಲನ್ ಉದ್ಘಾಟಿಸಿದರು. ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಪ್ರೇಮಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಛಾಯಾಗ್ರಾಹಕರಾದ ಪಿ.ಪಿ.ಕುಞÂಕೃಷ್ಣನ್, ವಕೀಲ ಸಿ ಶುಕೂರ್, ರಾಜೇಶ್ ಅಯಿಕೋಡನ್, ಚಿತ್ರಾ ನಾಯರ್, ರಾಜೇಶ್ ಪೆÇತಾವೂರ್ ಮತ್ತು ಸಿಬಿಕೆ ಥಾಮಸ್ ಅವರನ್ನು ಸನ್ಮಾನಿಸಲಾಯಿತು. ಸಂತೋಷ್ ಕೀಯಟ್ಟೂರ್, ನೀಲೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಾಧವನ್ ಮನಿಯಾರ, ಕಯ್ಯೂರುಚೀಮೇನಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಶಾಂತಾ, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಜೆ.ಸಜಿತ್, ಬ್ಲಾಕ್ ಪಂಚಾಯಿತಿ ಸದಸ್ಯೆ ಪಿ.ಬಿ.ಶೀಬಾ, ಚಲನಚಿತ್ರ ಅಕಾಡೆಮಿ ಸದಸ್ಯ ಪ್ರದೀಪ್ ಚೋಕ್ಲಿ, ಪಿ.ಕೆ.ಬೈಜು, ಅರವಿಂದನ್‍ಮಣಿಕೋತ್ ಮತ್ತು ಕೆ ರಾಧಾಕೃಷ್ಣನ್ ಉಪಸ್ಥಿತರಿದ್ದರು. ಕಯ್ಯೂರು ಫೈನ್‍ಆಟ್ರ್ಸ್ ಸೊಸೈಟಿ ವತಿಯಿಂದ ಪ್ರೇಮಕುಮಾರ್ ಅವರಿಗೆ ಸ್ಮರಣಿಕೆ ನೀಡಲಾಯಿತು. ಚಲನಚಿತ್ರ ಅಕಾಡೆಮಿ ಸದಸ್ಯ ಮನೋಜ್ ಕಾನ ಸ್ವಾಗತಿಸಿದರು. ಕೆ.ವಿ.ಲಕ್ಷ್ಮಣನ್ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳಿಗೆ 'ಚಿಲ್ಡ್ರನ್ ಆಫ್ ಹೆವನ್' ಚಿತ್ರ ಪ್ರದರ್ಶಿಸಲಾಯಿತು.
ನ. 29ರಂದು ಡಂಗುರ ಜಾಥಾ ಕೋಯಿಕ್ಕೋಡ್ ಜಿಲ್ಲೆ ಪ್ರವೇಶಿಸಲಿದ್ದು, ಡಿಸೆಂಬರ್ 13 ರಿಂದ 20 ರವರೆಗೆ ತಿರುವನಂತಪುರದಲ್ಲಿ ಚಲನಚಿತ್ರೋತ್ಸವ ನಡೆಯಲಿದೆ.






