ಕಾಸರಗೋಡು: ಕುತ್ತಿಕ್ಕೋಲ್ ಗ್ರಾಮ ಪಂಚಾಯಿತಿಯ ಕರಿವೇಡಗಂನಲ್ಲಿ ಆಟ್ಟಂಕಯ ಉನ್ನತಿ ಪ್ರದೇಶದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯಿತಿಯ ವಾರ್ಚಿಕ ಯೋಜನೆಯನ್ವಯ ಜರಿಗೊಳಿಸಲಾದ ಕುಡಿಯುವ ನೀರಿನ ಯೋಜನೆಯನ್ನು ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಅದ್ಯಕ್ಷೆ ವಕೀಲೆ ಎಸ್.ಎನ್ ಸರಿಥಾ ಉದ್ಘಾಟಿಸಿದರು.
ಕುತ್ತಿಕ್ಕೋಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುರಳಿ ಪಯ್ಯಂಗಾನಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮನು ಮುಖ್ಯ ಅತಿಥಿಯಾಗಿದ್ದರು.
ಕುತ್ತಿಕೋಲ್ ಗ್ರಾಮ ಪಂಚಾಯಿತಿ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಮೀರ್ ತುಂಬಕ್ಕೋಡ್, ಟಿ.ಪಿ.ಚಾಕೋ ಹಾಗೂ ಕೆ.ಜೆ.ರೋಜಿ ಉಪಸ್ಥಿತರಿದ್ದರು. ಕಾರಡ್ಕ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ರಮಣಿ ಸ್ವಾಗತಿಸಿದರು. ಸತ್ತಾರ್ ವಂದಿಸಿದರು.






