ಕಾಸರಗೋಡು: ಕೇರಳ ಮಹಿಳಾ ಆಯೋಗದ ಸದಸ್ಯೆ ಪಿ.ಕುಞËಯಿಷಾ ಅವರ ಅಧ್ಯಕ್ಷತೆಯಲ್ಲಿ ಕಾಸರಗೋಡು ನಗರಸಭಾಂಗಣದಲ್ಲಿ ನಡೆದ ದೂರು ಪರಿಹಾರ ಹಾಗೂ ಸಾಕ್ಷಿ ಸಂಗ್ರಹ ಅದಾಲತ್‍ನಲ್ಲಿ 62ದೂರುಗಳನ್ನು ಪರಿಗಣಿಸಲಾಯಿತು. ಈ ಪೈಕಿ 17 ದೂರುಗಳನ್ನು ಇತ್ಯರ್ಥಪಡಿಸಲಾಗಿದ್ದು, ಎರಡು ದೂರುಗಳನ್ನುಪೆÇಲೀಸ್ ವರದಿಗಾಗಿ ಕಳುಹಿಸಲಾಗಿದೆ. ಎರಡು ದೂರುಗಳನ್ನುಜಾಗೃತ ಸಮಿತಿಗೆ ಬಿಡಲಾಗಿದೆ. 25 ದೂರುಗಳನ್ನುಮುಂದಿನ ಅದಾಲತ್‍ನಲ್ಲಿ ಪರಿಗಣಿಸಲು ತೀರ್ಮಾನಿಸಲಾಯಿತು. ಹೊಸದಾಗಿ ನಾಲ್ಕು ದೂರುಗಳು ಬಂದಿವೆ.
ಕೌಟುಂಬಿಕ ಸಮಸ್ಯೆಗಳು, ಕೌಟುಂಬಿಕ ಹಿಂಸಾಚಾರ, ರಸ್ತೆ ವಿವಾದ, ಗಡಿ ವಿವಾದ ಇತ್ಯಾದಿ ಸಮಸ್ಯೆಗಳ ಬಗ್ಗೆ ಆಯೋಗವು ದೂರುಗಳನ್ನು ಸ್ವೀಕರಿಸಿತು. ಹಣಕಾಸಿನ ವಿಚಾರದಲ್ಲಿ ಮಹಿಳೆಯರು ನೀಡುವ ದೂರುಗಳನ್ನು ಪರಿಗಣಿಸುವಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. ಈ ಪ್ರವೃತ್ತಿ ಹೆಚ್ಚುತ್ತಿರುವುದನ್ನು ಆಯೋಗ ಪರಿಗಣಿಸುತ್ತಿದೆ. ಕುಟುಂಬ ಸಮಸ್ಯೆ ಎದುರಾದಾಗಲೆಲ್ಲ ಎಳೆಯ ಮಕ್ಕಳು ಎಚ್ಚಿನ ಸಂಕಷ್ಟಕ್ಕೆ ಒಳಗಾಗುತ್ತಿರುವುದಾಗಿಯೂ ಕುಞËಯಿಷ ತಿಳಿಸಿದರು. ಮಹಿಳಾ ಸೆಲ್ ಎಎಸ್‍ಐ ಟಿ ಶೈಲಜಾ, ಸಿಪಿಒ ಜಯಶ್ರೀ, ಕೌನ್ಸಿಲರ್ ರಮ್ಯಾ ಮೋಲ್, ವಕೀಲೆ ಪಿ ಸಿಂಧು ಮೊದಲಾದವರು ಉಪಸ್ಥಿತರಿದ್ದರು.






