ಕಾಸರಗೋಡು: ಹದಿನಾಲ್ಕರ ಹರೆಯದ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ತಂದೆ ವಿರುದ್ಧ ಬೇಕಲ ಠಾಣೆ ಪೊಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ. ಕಿರುಕುಳಕ್ಕೊಳಗಾದ ಬಾಲಕಿ ಹಾಗೂ ತಂದೆ ಮಲಪ್ಪುರಂ ಜಿಲ್ಲೆಯವರಾಗಿದ್ದು, ಅಲ್ಲೇ ಕಿರುಕುಳ ನಡೆದಿತ್ತು. ಬಾಲಕಿ ಬೇಕಲ ಪೊಲೀಸ್ ಠಾಣೆ ವಯಾಪ್ತಿಯ ಸಂಬಂಧಿಕರ ಮನೆಗೆ ಆಗಮಿಸಿದ್ದ ಸಂದರ್ಭ ತಂದೆಯಿಂದಾದ ದೌರ್ಜನ್ಯ ಬಹಿರಂಗಪಡಿಸಿದ್ದಾಳೆ. ಮಲಪ್ಪುರಂನಲ್ಲಿ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಅಲ್ಲಿನ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.




