ಬದಿಯಡ್ಕ: ಶಿವಳ್ಳಿ ಸಮುದಾಯದ ಸಂಘಟನೆ ಶಿವಳ್ಳಿ ಬ್ರಾಹ್ಮಣ ಸಭಾ ಕಾಸರಗೋಡು ಇದರ ವತಿಯಿಂದ ನಡೆಯುತ್ತಿರುವ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಭಾನುವಾರ ಎಡನೀರು ಮಠದ ಶಾಲೆಯಲ್ಲಿ ಕೇರಂ ಮತ್ತು ಚೆಸ್ ಸ್ಪರ್ಧೆ ಆಯೋಜಿಸಲಾಗಿತ್ತು.
ಸ್ಪರ್ಧೆಗಳಲ್ಲಿ 90 ಕ್ರೀಡಾ ಪಟುಗಳು ಉತ್ಸಾಹದಿಂದ ಪಾಲ್ಗೊಂಡರು .ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದು ಬಹುಮಾನ ವಿತರಿಸಲಾಯಿತು.
ಸ್ಪರ್ಧೆಯ ಆತೀಥ್ಯವನ್ನು ಏತಡ್ಕ ವಲಯದವರು ವಹಿಸಿದ್ದರು. ಶ್ರೀನಿವಾಸ ಅಮ್ಮಣ್ಣಾಯ ನೇತೃತ್ವ ವಹಿಸಿದ್ದರು. ಕೇಂದ್ರ ಪ್ರಧಾನ ಕಾರ್ಯದರ್ಶಿ ಚೇತನ ರಾಮ ನೂರಿತ್ತಾಯ, ಖಜಾಂಚಿ ಸೀಮಾ ಬಳ್ಳುಳ್ಳಾಯ, ಸೀತಾರಾಮ ಕಡಂಮಣ್ಣಾಯ ಮೊದಲಾದ ಮುಖಂಡರು ಉಪಸ್ಥಿತರಿದ್ದರು.