ಬದಿಯಡ್ಕ: ರೋಟರಿ ಕನಸಿನ ಮನೆ ಯೋಜನೆಯ ಅಂಗವಾಗಿ ಮಾನ್ಯ ಲಕ್ಷಂವೀಡು ಕೋಲನಿಯಲ್ಲಿರುವ ಚನಿಯಪ್ಪ ಪೂಜಾರಿ ಅವರಿಗೆ ಮಂಜೂರಾದ ಮನೆ ನಿರ್ಮಾಣಕಾರ್ಯಕ್ಕೆ ಶಿಲಾನ್ಯಾಸ ನಡೆಸಲಾಯಿತು.
ರೋಟರಿ ಬದಿಯಡ್ಕ ನೇತೃತ್ವದಲ್ಲಿ ಕಾಮಗಾರಿಗಳು ನಡೆಯಲಿದ್ದು ಘಟಕ ಅಧ್ಯಕ್ಷ ಕೇಶವ ಪಾಟಾಳಿ ಬದಿಯಡ್ಕ ಅವರು ಭಾನುವಾರ ಬೆಳಗ್ಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ರೋಟರಿ ಸಂಘಟನೆಯು ಬಡಜನರಿಗೆ ನೆರವಾಗುವ ಸದುದ್ದೇಶದೊಂದಿಗೆ ಕನಸಿನ ಮನೆ ಯೋಜನೆಯನ್ನು ಹಮ್ಮಿಕೊಂಡಿದೆ. ಇದೀಗ ಬದಿಯಡ್ಕ ಗ್ರಾಮಪಂಚಾಯಿತಿಯ 15ನೇ ವಾರ್ಡಿನಲ್ಲಿರುವ ಚನಿಯಪ್ಪ ಅವರ ಬಡತನವನ್ನು ಮನಗಂಡು ಅವರೊಂದಿಗೆ ಕೈಜೋಡಿಸಿದ್ದೇವೆ. ರೋಟರಿ ಅನೇಕ ಜನಪರ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದ್ದು, ಇದು ಮೊದಲ ಮನೆ ನಿರ್ಮಾಣಕಾರ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಸದಸ್ಯ ಶ್ಯಾಮಪ್ರಸಾದ ಮಾನ್ಯ, ರೋಟರಿ ಕಾರ್ಯದರ್ಶಿ ರಮೇಶ ಆಳ್ವ ಕಡಾರು, ಕೋಶಾಧಿಕಾರಿ ಗೋಪಾಲಕೃಷ್ಣ ಕಾಮತ್, ಸದಸ್ಯರುಗಳಾದ ಜಗನ್ನಾಥ ರೈ ಕೊರೆಕ್ಕಾನ, ಮಂಜುನಾಥ ಮಾನ್ಯ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.