HEALTH TIPS

ಆನೆಬಾಗಿಲು ತರವಾಡುಮನೆ ವಾರ್ಷಿಕ ಮಹಾಸಭೆ, ಕುಟುಂಬ ಸಂಗಮ

ಕಾಸರಗೋಡು: ನಗರದ ಆನೆಬಾಗಿಲು ದೊಡ್ಡಮನೆ ತರವಾಡಿನ ವಾರ್ಷಿಕ ಮಹಾಸಭೆ ಮತ್ತು ಕುಟುಂಬ ಸಂಗಮ ಕಾರ್ಯಕ್ರಮ ತರವಾಡು ಮನೆಯಲ್ಲಿ ಜರುಗಿತು. ಈ ಸಂದರ್ಭ  ವಿವಿಧ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ, ತರವಾಡು ಸಮಿತಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ಸಮಾರಂಭ ಉದ್ಘಾಟಿಸಿದರು. ರಾಜ್ಯ ಪಠ್ಯ ಪುಸ್ತಕ ನಿವೃತ್ತ ಅಧಿಕಾರಿ ಸುರೇಶ ಸೂರಾಲು ಅಧ್ಯಕ್ಷತೆ ವಹಿಸಿದ್ದರು.  ಕಾರ್ನವರ್ ಮುಕುಂದನ್ ವಿದ್ಯಾನಗರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಳಂಗರೆ ಪುಲಿಕುಂಜೆ ಶ್ರೀ ಭಗವತಿ ಸೇವಾ ಸಂಗಮದ ಅಧ್ಯಕ್ಷ ಎನ್.ಸತೀಶನ್, ಪ್ರಧಾನ ಕಾರ್ಯದರ್ಶಿ ಎ.ಗಣೇಶ್, ಕೋಶಾಧಿಕಾರಿ ಕೆ.ರಾಜೇಶ್, ದಾಸನ್ ಕಂಡತ್ತಿಲ್, ಟಿ.ಕುಮಾರನ್, ಬಿ.ಎ.ಅರವಿಂದಾಕ್ಷನ್, ಉಷಾ, ಎ.ಜಯಚಂದ್ರ, ಉದಯನ್‍ಉದಯಗಿರಿ ಉಪಸ್ಥಿತರಿದ್ದರು. ಆಡಳಿತ ಸಮಿತಿ ಕಾರ್ಯದರ್ಶಿ ಹಾಗೂ ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯ ಸುಕುಮಾರ್ ಕುದ್ರೆಪ್ಪಾಡಿ ಸ್ವಾಗತಿಸಿದರು.  ಆಡಳಿತ ಸಮಿತಿ ಕೋಶಾಧಿಕಾರಿ ವಿನಯನ್ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries