ಕಾಸರಗೋಡು : ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಜನರಲ್ ಮೆಡಿಸಿನ್, ಪೀಡಿಯಾಟ್ರಿಕ್ಸ್, ಡರ್ಮಟಾಲಜಿ ಮತ್ತು ವೆನೆರಿಯಾಲಜಿ, ಕಮ್ಯುನಿಟಿ ಮೆಡಿಸಿನ್, ಪಲ್ಮನರಿ ಮೆಡಿಸಿನ್, ರೇಡಿಯೊಡಯಾಗ್ನೋಸಿಸ್, ಇಎನ್‍ಟಿ ಸೇರಿದಂತೆ ಆಯಾ ವಿಭಾಗಗಳಲ್ಲಿ ಎಂಡಿ/ಡಿಎನ್‍ಬಿ ವಿದ್ಯಾರ್ಹತೆ ಮತ್ತು ಟಿಸಿಎಂಸಿ ನೋಂದಣಿ ಹೊಂದಿರುವ ಅಭ್ಯರ್ಥಿಗಳು ನೇತ್ರವಿಜ್ಞಾನ ಮತ್ತು ಮನೋವೈದ್ಯಶಾಸ್ತ್ರ ವಿಭಾಗದಲ್ಲಿ ತೆರವಾಗಿರುವ ಸೀನಿಯರ್ ರೆಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಎಂಬಿಬಿಎಸ್ ಮತ್ತು ಟಿಸಿಎಂಸಿ ನೋಂದಣಿ ಹೊಂದಿರುವ ಅಭ್ಯರ್ಥಿಗಳು ಖಾಲಿ ಇರುವ ಜೂನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ನೇಮಕಾತಿ ಒಂದು ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ ನಡೆಯಲಿದೆ. ಅರ್ಹತೆ ಮತ್ತು ಕೆಲಸದ ಅನುಭವ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಅರ್ಹತೆ ಮತ್ತು ಕೆಲಸದ ಅನುಭವವನ್ನು ಸಾಬೀತುಪಡಿಸುವ ಪ್ರಮಾಣಪತ್ರ ಮತ್ತು ಅವುಗಳ ಪ್ರತಿಗಳೊಂದಿಗೆ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಪ್ರಾಂಸುಪಾಲರ ಕಚೇರಿಗೆ ನ. 28 ರಂದು ಬೆಳಿಗ್ಗೆ 11 ಗಂಟೆಗೆ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.




