ಕಾಸರಗೋಡು: ಕೇರಳ ಸರಕಾರದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿರುವ ಸೆಂಟರ್ ಫಾರ್ ರಿಸರ್ಚ್ ಅಂಡ್ ಡೆವಲಪ್‍ಮೆಂಟ್ ಇಂಪ್ಲಿಮೆಂಟಿಂಗ್ ಏಜೆನ್ಸಿ ಹೊಸದುರ್ಗ ಮತ್ತು ವೆಳ್ಳರಿಕುಂಡ್ ತಾಲೂಕುಗಳಲ್ಲಿ ಜಾರಿಗೆ ತಂದಿರುವ 'ಕಾವಲ್ ಪ್ಲಸ್ ಯೋಜನೆ'ಯ ಕೇಸ್ ವರ್ಕರ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.
ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ನಿಯಮಿತ ಕೋರ್ಸ್ ಆಗಿ ಸೋಶಿಯಲ್ ವರ್ಕ್ ನಲ್ಲಿ(ಎಚ್‍ಆರ್ ಹೊರತುಪಡಿಸಿ) ಸ್ನಾತಕೋತ್ತರ ಪದವಿಯೊಂದಿಗೆ (ಎಂ ಎಸ್ ಡಬ್ಲ್ಯೂ, ನಿಯಮಿತ) ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಒಂದು ವರ್ಷದ ಕೆಲಸದ ಅನುಭವವಿರುವ ಅರ್ಹ ಉದ್ಯೋಗಾರ್ಥಿಗಳು ಸ್ವಯಂ-ಸಿದ್ಧಪಡಿಸಿದ ಅರ್ಜಿ, ಬಯೋಡೇಟಾ , ಅರ್ಹತಾ ಪ್ರಮಾಣಪತ್ರ ಮತ್ತು ಕೆಲಸದ ಅನುಭವದ ಪ್ರಮಾಣಪತ್ರಗಳ ಸ್ವಯಂ ದೃಢೀಕರಿಸಿದ ಪ್ರತಿಗಳೊಂದಿಗೆ ಡಿಸೆಂಬರ್ 7 ರಂದು ಸಂಜೆ 5ರೊಳಗೆ ನೀಲೇಶ್ವರಂ, 3ನೇ ಕುಟ್ಟಿಯ ಸಿಆರ್‍ಡಿ ಕಚೇರಿಯಲ್ಲಿ ಖುದ್ದಾಗಿ ಅಥವಾ ಇಮೇಲ್ ಮೂಲಕ ಸಲ್ಲಿಸಬೇಕು. ಇಮೇಲ್ ಐಡಿ: ಞಚಿvಚಿಟಠಿಟusಛಿಡಿಜ@gmಚಿiಟ.ಛಿom ದೂರವಾಣಿ ಸಂಖ್ಯೆ: 833082290.




.webp)
