ಕುಂಬಳೆ: ಕನ್ನಡ ಮತ್ತು ತುಳು ಭಾಷೆಗಳು ಕಾಸರಗೋಡಿನ ಸಂಸ್ಕøತಿಯ ವಾಹಕಗಳಾಗಿದ್ದು, ಇವುಗಳೆರಡೂ ಭಾಷಾ ಬಾಂಧವ್ಯದ ಪ್ರತೀಕವಾಗಿರುವುದಾಗಿ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ, ನಿವೃತ್ತ ಪ್ರಾಂಶುಪಾಲ ಪ್ರೊ. ಪಿ.ಎನ್ ಮೂಡಿತ್ತಾಯ ಹೇಳಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಗುಮ್ಮಣ್ಣ ಶೆಟ್ಟಿ ಜೈನ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ' ಕನ್ನಡ ತುಳು ಭಾಷಾ ಬಾಂಧವ್ಯ 'ಎನ್ನುವ ವಿಷಯದ ಕುರಿತು ಮಾತನಾಡಿದರು
ಯಕ್ಷಗಾನ ಈ ಮಣ್ಣಿನ ಕಲೆ. ತುಳು ಮತ್ತು ಕನ್ನಡ ಯಕ್ಷಗಾನಗಳು ಇಲ್ಲಿನ ತುಳು ಕನ್ನಡ ಭಾಷಾ ಬಾಂಧವ್ಯವನ್ನು ಗಟ್ಟಿಗೊಳಿಸಿದೆ. ಭೂತಾರಾಧನೆಯೂ ತುಳುವಿಗೆ ಮಹತ್ವವನ್ನು ನೀಡಿದೆ. ಕಾಸರಗೋಡಿನ ಜನತೆ ತುಳು ಮತ್ತು ಕನ್ನಡವನ್ನು ಸಹೋದರ ಭಾವದಿಂದ ಕಂಡಿದ್ದಾರೆ ಎರಡೂ ಭಾಷೆಗಳು ಪರಸ್ಪರ ಪೂರಕವಾಗಿರುವುದಾಗಿ ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದರು.
ಕ್ಯಾಂಪೆÇ್ಕೀ ಮಾಜಿ ಉಪಾಧ್ಯಕ್ಷ ಸತೀಶ್ಚಂದ್ರ ಭಂಡಾರಿ ಕೋಳಾರು, ಶಾಲಾ ಪ್ರಾಂಶುಪಾಲ ರಾಮಚಂದ್ರ ಭಟ್.ಎನ್, ನಿವೃತ್ತ ಪ್ರಾಂಶುಪಾಲ ಡಾ. ಕೆ. ಕಮಲಾಕ್ಷ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕ.ಸಾ.ಪ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಕನ್ನಡ ತುಳು ಭಾವಗಾಯನ ನಡೆಸಿದರು. ಕಸಾಪ ಸಂಘಟನಾ ಕಾರ್ಯದರ್ಶಿಗಳಾದ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿದರು. ಉಪನ್ಯಾಸಕ ಸತೀಶ್ ಕುಮಾರ್ ಶೆಟ್ಟಿ ಒಡ್ಡಂಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಪಿ. ರಾಮಚಂದ್ರ ಭಟ್ ಧರ್ಮತ್ತಡ್ಕ ವಂದಿಸಿದರು.






