HEALTH TIPS

ಮಂಜೇಶ್ವರ ಶಾಸಕ ನಿಧಿ- ವರ್ಕಾಡಿ ಪಂಚಾಯತ್ 3 ರಸ್ತೆಗಳ ಉದ್ಘಾಟನೆ

ಮಂಜೇಶ್ವರ : ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ರವರ ಶಾಸಕ ನಿಧಿ ವಿನಿಯೋಗಿಸಿ ವರ್ಕಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ನಿರ್ವಹಣೆ ಮಾಡಲಾದ ಮೂರು ರಸ್ತೆಗಳಲ್ಲಿ ಐದು ಲಕ್ಷ ರೂ. ವೆಚ್ಚದ  ಕೊಡ್ಲಮೊಗರು ದೇವಸ ರಸ್ತೆ, ಹದಿನೈದು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬಜಲಕರಿಯ ಪೆÇಯ್ಯ ರಸ್ತೆ ಹಾಗೂ ಐದು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ತೌಡುಗೋಳಿ ಆಲಬೆ ರಸ್ತೆ ಗಳನ್ನು ಶಾಸಕ ಎ ಕೆ ಎಂ ಅಶ್ರಫ್ ಬುಧವಾರ ಲೋಕಾರ್ಪಣೆ ಗೊಳಿಸಿದರು.

ಈ ಯೋಜನೆಗಳು ಕ್ಷೇತ್ರದ ನಿವಾಸಿಗಳಿಗೆ ಸುಗಮ ಪ್ರಯಾಣವನ್ನು ಒದಗಿಸುವ ಉದ್ದೇಶವನ್ನು ಹೊಂದಿದ್ದು, ಸ್ಥಳೀಯ ಅಭಿವೃದ್ಧಿಯ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯನ್ನು ಎತ್ತಿ ತೋರಿಸಿದೆ.

ಮುಂಬರುವ ವರ್ಷಗಳಲ್ಲಿ ಕ್ಷೇತ್ರದಾದ್ಯಂತ ಜನರಿಗೆ ಅನುಕೂಲಕರವಾಗುವ ರೀತಿಯಲ್ಲಿ ಇನ್ನಷ್ಟು ರಸ್ತೆಗಳನ್ನು ಅಭಿವೃದ್ಧಿಗೊಳಿಸಲು ಮುಂಗಡ ನೀಡುವುದಾಗಿಯೂ ಮಂಜೇಶ್ವರ ಕ್ಷೇತ್ರದಲ್ಲಿ ಉದ್ಯೋಗಸ್ಥರ ಅಭಾವವು ಇನ್ನಿತರ ಯೋಜನೆಗಳ ನಿರ್ವಹಣೆಗೆ ತೊಡಗಿರುವುದಾಗಿಯೂ ಮುಂದಿನ ತಿಂಗಳಲ್ಲಿ ನಡೆಯುವ ವಿಧಾನ ಸಭಾ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತುವುದಾಗಿಯೂ ಈ ಸಂದರ್ಭದಲ್ಲಿ ಶಾಸಕರು ಭರವಸೆಯ ಮಾತುಗಳನ್ನು ಹೇಳಿದರು.

ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ ಅಧ್ಯಕ್ಷತೆ ವಹಿಸಿದರು. ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಶೇಖರ್, ಪಂಚಾಯತ್ ಸದಸ್ಯರುಗಳಾದ ಅಬ್ದುಲ್ ಮಜೀದ್ ಬಿ ಎ, ಉಮ್ಮರ್, ಪದ್ಮಾವತಿ, ಮಾಜಿಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಿ ಬಿ ಅಬೂಬಕ್ಕರ್ ಪಾತೂರು, ಮಾಜಿ ಸದಸ್ಯರಾದ ಮುಹಮ್ಮದ್ ಮಜಾಲ್, ನಿಕೋಲಸ್ ಮೊಂತೆರೋ ,ಹಾಗೂ ಹಸೈನಾರ್ ದೇವಸ, ಮುಹಮ್ಮದ್ ದೇವಸ, ಅಬ್ದುಲ್ ಕರೀಂ ಮಾಸ್ಟರ್, ಸಿದ್ದೀಕ್ ಕೊಡ್ಲಮೊಗರು, ರೋನಿ ಡಿಸೋಜ, ಗೋಡ್ವಿನ್, ಬಾಸ್ಕರ್ ಪೆÇಯ್ಯ, ಫೆಲಿಕ್ಸ್ ಡಿಸೋಜ, ಮುಹಮ್ಮದ್ ಬಟ್ಯಡ್ಕ, ಲತೀಫ್ ತೋಕೆ, ಕುಂuಟಿಜeಜಿiಟಿeಜ ಟಿ ಎಂ, ಮೊಯ್ದಿನ್ ಕುಂuಟಿಜeಜಿiಟಿeಜ ತೋಕೆ ಮೊದಲಾದವರು ಭಾಗವಹಿಸಿದರು. ಈ ಸಂದರ್ಭ ಗ್ರಾಮಸ್ಥರು ಶಾಸಕರನ್ನು ಶಾಲು ಹೊದಿಸಿ ಸನ್ಮಾನಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries