ಉಪ್ಪಳ : ಉಪ್ಪಳ ಪೇಟೆಯಲ್ಲಿ ಎಟಿಎಂ ಯಂತ್ರಕ್ಕೆ ತುಂಬಲು ತಂದಿದ್ದ 50ಲಕ್ಷ ರೂ. ನಗದನ್ನು ಹಾಡಹಗಲು ದೋಚಿದ ಪ್ರಕರಣದ ಮತ್ತೊಬ್ಬ ಆರೋಪಿ ತಮಿಳ್ನಾಡು ತ್ರಿಚ್ಚಿ ರಾಮ್‍ಜಿನಗರ್ ನಿವಾಸಿ ಕಾರ್ವರ್ಣನ್(28)ಎಂಬಾತನನ್ನು ಡಿವೈಎಸ್‍ಪಿ ಸಿ.ಕೆ ಸುನಿಲ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಾರ್ವರ್ಣನ್‍ಕಳವುತಂಡದ ಸೂತ್ರಧಾರನಾಗಿದ್ದು, ಈತ ತಮಿಳ್ನಾಡಿನಲ್ಲಿರುವ ಬಗ್ಗೆ ಮಾಹಿತಿ ಪಡೆದ ತನಿಖಾ ತಂಡ ಮಾರುವೇಷದಲ್ಲಿ ತೆರಳಿ ಕಾರ್ಯಾಚರಣೆ ನಡೆಸಿದ್ದಾರೆ. ಪೊಲಿಸರನ್ನು ಕಂಡು ಓಡಿ ಪರಾರಿಯಾಘಲೆತ್ನಿಸಿದ್ದ ಈತನನ್ನು ಹಿಂಬಾಲಿಸಿ ಸೆರೆಹಿಡಿಯಲಾಗಿದೆ. ಆರೋಪಿಗಳ ಸೆರೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಖಾರಿ ಶಿಲ್ಪಾ ಡಿ. ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಪ್ರಕರಣದ ಇನ್ನೊಬ್ಬ ಆರೋಪಿ ತಮಿಳ್ನಾಡು ನಿವಾಸಿ ಮುತ್ತುಕುಮಾರನ್(47)ಎಂಬಾತನನ್ನು ಈ ಹಿಂದೆ ಬಂಧಿಸಲಾಗಿತ್ತು. ಈತನನ್ನು ವಿಚಾರಣೆಗೊಳಪಡಿಸಿದಾಘ ಕಾರ್ವರ್ಣನ್ ಬಗ್ಗೆ ಮಾಹಿತಿ ನೀಡಿದ್ದನು.
2024 ಮಾ. 27ರಂದು ಉಪ್ಪಳದಲ್ಲಿ ಕಳವು ನಡೆದಿದೆ. ಎಟಿಯಂ ಸನಿಹ ಆಗಮಿಸಿದ ವಾಹನದಲ್ಲಿದ್ದ ಸಿಬ್ಬಂದಿ 50ಲಕ್ಷ ಮೊತ್ತದ ಒಂದು ಬ್ಯಾಗನ್ನು ಸೀಟ್ ಮಧ್ಯೆ ಇರಿಸಿ, 50ಲಕ್ಷ ಮೊತ್ತದ ಇನ್ನೊಂದು ಬ್ಯಾಗಿನೊಂದಿಗೆ ಎಟಿಎಂಗೆ ತುಂಬಲು ಕೆಳಗಿಳಿದು ಬಾಗಿಲು ಭದ್ರಪಡಿಸಿದ್ದರು. ಎಟಿಎಂಗೆ ಹಣ ತುಂಬಿ, ಇನ್ನೊಂದು ಬ್ಯಾಗ್‍ನ ಹಣ ತೆಗೆಯಲು ಆಗಮಿಸಿದಾಗ, ವಾಹನದ ಗಾಜು ಒಡೆದು ಬ್ಯಾಗ್ ಎಗರಿಸಿರುವುದು ಬೆಳಕಿಗೆ ಬಂದಿತ್ತು.




.webp)
