ಕಾಸರಗೋಡು: ನಗರದ ಚಂದ್ರಗಿರಿ ಸೇತುವೆಯಿಂದ ಹೊಳಗೆ ಹಾರಿದ ವ್ಯಕ್ತಿಯನ್ನು ಕಾಸರಗೋಡು ಮೀಪುಗುರಿ ನಿವಾಸಿ ಹಾಗೂ ವರ್ಕ್‍ಶಾಪ್ ನಡೆಸುತ್ತಿರುವ ಗಿರೀಶ್ ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ಜನರು ನೋಡುತ್ತಿದ್ದಂತೆ ವ್ಯಕ್ತಿಯೊಬ್ಬ ಧಾವಿಸಿ ಬಂದು ಚಂದ್ರಗಿರಿ ಸೇತುವೆಯನ್ನೇರಿ ಹೊಳೆಗೆ ಧುಮುಕಿರುವುದಾಗಿ ಸ್ಥಳೀಯರು ತಿಳಿಸಿದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ಹಾಗೂ ಪೆÇಲೀಸರು ಹುಡುಕಾಟ ಆರಂಭಿಸಿದ್ದರೂ, ಪತ್ತೆಕಾರ್ಯ ಸಾಧ್ಯವಾಗಿರಲಿಲ್ಲ. ಅಗ್ನಿಶಾಮಕ ದಳ ಹಾಗೂ ಪೊಲೀಸರು ಶನಿವಾರವೂ ಶೋಧಕಾರ್ಯ ಮುಂದುವರಿಸಿದ್ದಾರೆ.




