ಕಾಸರಗೋಡು: ಎರಿಞÂಪುಯದಲ್ಲಿಪಯಸ್ವಿನಿ ಹೊಳೆಯಲ್ಲಿ ನೀರುಪಾಲಾದ ಮಕ್ಕಳ ಹೆತ್ತವರ ಮನೆಗೆ ಸಚಿವ ರಾಮಚಂದ್ರನ್ ಕಡನ್ನಪಳ್ಳಿ ಶನಿವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಎರಿಞÂಪುಳದ ರಿಯಾಸ್, ಯಾಸಿನ್ ಹಾಗೂ ಸಮದ್ ದಾರುಣವಾಗಿ ಮೃತಪಟ್ಟಿದ್ದು, ಇವರ ಹೆತ್ತವರನ್ನು ಭೇಟಿ ನೀಡಿ ಸಂತೈಸಿದರು. ಶಾಸಕ ಸಿ.ಎಚ್ ಕುಞಂಬು, ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್, ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿಜಿ ಮ್ಯಾಥ್ಯೂ ಮೊದಲಾದವರು ಜತೆಗಿದ್ದರು.





