ಕಾಸರಗೋಡು: ಎರಿಞÂಪುಯದಲ್ಲಿ ಪಯಸ್ವಿನಿ ಹೊಳೆಗೆ ಸ್ನಾನಕ್ಕಿಳಿದ ಒಂದೇ ಕುಟುಂಬದ ಮೂವರು ಬಾಲಕರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಎರಿಞÂಪುಯ ನಿವಾಸಿ ಅಶ್ರಫ್-ಶಬಾನಾ ದಂಪತಿ ಪುತ್ರ ಯಾಸಿನ್(13), ಅಶ್ರಫ್ ಸಹೋದರ ಮಜೀದ್ ಅವರ ಪುತ್ರ ಸಮದ್(13) ಹಾಗೂ ಇವರ ಸಹೋದರಿ ರಮ್ಲಾ-ಸಿದ್ದೀಕ್ ಅವರ ಪುತ್ರ ರಿಯಾಸ್(18)ಮೃತಪಟ್ಟವರು.
ಎರಿಞÂಪುಯದ ಕುಟುಂಬದ ಮನೆಗೆ ಆಗಮಿಸಿದ್ದ ಮೂರೂ ಮಂದಿ ಸ್ನಾನಕ್ಕಾಗಿ ಪಯಸ್ವಿನಿ ನದಿಗಿಳಿದಿದ್ದರು. ಪಯಸ್ವಿನಿ ಹೊಳೆಯ ಸೇತುವೆ ಸನಿಹ ಇವರು ನೀರಿಗಿಳಿದಿದ್ದು, ನೀರಿನ ಸುಳಿಗೆ ಸಿಲುಕಿರಬೇಕೆಂದು ಸಂಶಯಿಸಲಾಗಿದೆ. ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ರಿಯಾಸ್ ಮೃತದೇಹ ತಾಸಿನೊಳಗೆ ಪತ್ತೆಯಾಗಿದ್ದರೂ, ಉಳಿದವರ ಮೃತದೇಹ ಹಲವು ತಾಸುಗಳ ಕಾರ್ಯಾಚರಣೆ ನಂತರ ಪತ್ತೆಯಾಗಿದೆ.




.webp)
