ಕಾಸರಗೋಡು: ರಾಜ್ಯದ ಗಮನಸೆಳೆದಿದ್ದ ಕಾಸರಗೋಡು ಕಲ್ಯೋಟ್ ನಿವಾಸಿಗಳು ಹಾಗೂ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್(19) ಹಾಗೂ ಶರತ್ ಲಾಲ್(25)ಕೊಲೆ ಪ್ರಕರಣದ 14ಮಂದಿಯ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಇವರಿಗೆ ಶಿಕ್ಷೆ ಪ್ರಮಣವನ್ನು ಜ. 3ರಂದು ನ್ಯಾಯಾಲಯ ವಿಧಿಸಲಿದೆ. ಪರಕರಣದ ಇತರ ಹತ್ತು ಮಂದಿ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಕೊಲೆ ಪ್ರಕರಣದಲ್ಲಿ ಎಂಟು ಮಂದಿ ನೇರವಾಗಿ ಶಾಮೀಲಾಗಿರುವುದನ್ನು ನ್ಯಾಯಾಲಯ ಸಾಬೀತುಪಡಿಸಿದೆ.
ಉದುಮದ ಮಾಜಿ ಶಾಸಕ, ಸಿಪಿಎಂ ಸೆಕ್ರೆಟೇರಿಯೆಟ್ ಸದಸ್ಯ ಕೆ.ವಿ ಕುಞÂರಾಮನ್, ಪ್ರಕರಣದ ಒಂದನೇ ಆರೋಪಿ ಪೀತಾಂಬರನ್, ಎ. ಮಣಿಕಂಠನ್ ಸೇರಿದಂತೆ 14ಮಂದಿ ಆರೋಪಿಗಳನ್ನು ತಪ್ಪಿತಸ್ಥರೆಂದು ನ್ಯಾಯಾಲಯ ಗುರುತಿಸಿದೆ.
2019 ಫೆಬ್ರವರಿ 17 ರಂದು ರಾತ್ರಿ ಬೈಕಲ್ಲಿ ಸಂಚರಿಸುತ್ತಿದ್ದ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಹಾಗೂ ಶರತ್ ಲಾಲ್ ಎಂಬವರನ್ನು ತಂಡವೊಂದು ಬರ್ಬರವಾಗಿ ಕೊಲೆ ನಡೆಸಿತ್ತು. ಆರಂಭದಲ್ಲಿ ಸ್ಥಳೀಯ ಪೊಲೀಸರು ಹಾಗೂ ನಂತರ ಕ್ರೈಂ ಬ್ರಾಂಚ್ ಪ್ರಕರಣದ ತನಿಖೆ ನಡೆಸಿತ್ತು. ತನಿಖೆಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಕೃಪೇಶ್ ಹಾಗೂ ಶರತ್ ಲಾಲ್ ಸಿಬಿಐ ತನಿಖೆಗಾಗಿ ಹೈಕೋರ್ಟಿನ ಮೊರೆಹೋದ ಹಿನ್ನೆಲೆಯಲ್ಲಿ ನಂತರ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿತ್ತು.ಸಿಬಿಐ ತಿರುವನಂತಪುರ ಘಟಕ ಡಿವೈಎಸ್‍ಪಿ ಅನಂತಕೃಷ್ಣನ್ ನೇತ್ರತ್ವದ ಅಧಿಕಾರಿಗಳ ತಂಡ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿತ್ತು.





