ಕಾಸರಗೋಡು: ಸರ್ಕಾರಿ ಐ.ಟಿ.ಐ ಯಲ್ಲಿ ಕೈಗಾರಿಕಾ ತರಬೇತಿ ಇಲಾಖೆಯ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಕೌಶಲ್ಯ ಅಭಿವೃದ್ಧಿ ಸಚಿವಾಲಯ ಹಾಗೂ ರಾಜ್ಯ ಉದ್ಯೋಗ ನೈಪುಣ್ಯ ಇಲಾಖೆಗಳ ಸಹಯೋಗದೊಂದಿಗೆ ನಡೆಸುವ ಪ್ರಧಾನಮಂತ್ರಿ ನ್ಯಾಶನಲ್ ಅಪ್ರೆಂಟಿಸ್‍ಶಿಪ್ ಮೇಳ ಡಿ. 9ರಂದು ಬೆಳಗ್ಗೆ 10ಕ್ಕೆ ಜರಗಲಿದೆ.
ಜಿಲ್ಲೆಯ ಉದ್ಯಮ ವಾಣಿಜ್ಯ ಸಂಸ್ಥೆಗಳಿಗೆ ಅಪ್ರೆಂಟೀಸರನ್ನು ಆಯ್ಕೆ ಮಾಡಬಹುದಾಗಿದೆ. ಇಂಜಿನಿಯರಿಂಗ್, ನೋನ್ ಇಂಜಿನಿಯರಿಂಗ್ ಟ್ರೇಡ್‍ಗಳಲ್ಲಿ ಐ.ಟಿ.ಐ ಅರ್ಹತೆ ಪಡೆದ ಉದ್ಯೋಗಿಗಳಿಗೆ ಭಾಗವಹಿಸಬಹುದು. ಅರ್ಹತೆ ಸಾಬೀತುಪಡಿಸುವ ಪ್ರಮಾಣಪತ್ರಗಳು, ಆಧಾರ್ ಕಾರ್ಡ್ ಗಳನ್ನು ಹಾಜರುಪಡಿಸಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (9400690213, 9048790503, 04994 256440)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




