ಕಾಸರಗೋಡು: ಚಾಲಿಂಗಾಲ್ ಶ್ರೀ ಅಯ್ಯಪ್ಪ ಭಜನಾಮಂದಿರದ ವಾರ್ಷಿಕೋತ್ಸವ ಸಂದರ್ಭ ಮಕ್ಕಳ ಕಲಾಸಾಂಸ್ಕøತಿಕ ಕಾರ್ಯಕ್ರಮದ ವಿಡಿಯೋ ಚಿತ್ರೀಕರಿಸಿದ ವಿಷಯಕ್ಕೆ ಸಂಬಂಧಿಸಿ ನಡೆದ ಘರ್ಷಣೆಯಲ್ಲಿ ಯುವಕನ ತಲೆಗೆ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ಪುಲ್ಲುರ್ ಪೆರಿಯ ಚಾಲಿಂಗಾಲ್ ನಿವಾಸಿ ಮಣಿ(30)ಎಂಬಾತನನ್ನು ಅಂಬಲತ್ತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಡಿ. 22ರಂದು ರಾತ್ರಿ ಘಟನೆ ನಡೆದಿದ್ದು, ಗಾಯಗೊಂಡಿರುವ ಕಾಞಂಗಾಡು ಗುರುವನ ನಿವಾಸಿ ಮಹಮ್ಮದ್ ಇಜಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾನೆ.
ಶ್ರೀ ಅಯ್ಯಪ್ಪ ಮಂದಿರದಲ್ಲಿ ನಡೆದ ಕಾರ್ಯಕ್ರಮಕ್ಕೆ ಇಜಾಸ್ ತನ್ನ ಸ್ನೇಹಿತರ ಜತೆ ಆಗಮಿಸಿ ಆಹಾರ ಸೇವಿಸುವ ಮಧ್ಯೆ ಮಣಿ ಕುರ್ಚಿಯಿಂದ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಕಾರ್ಯಕ್ರಮದ ಹಿಂದಿನ ದಿನ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮವನ್ನು ಇಜಾಸ್ ವಿಡಿಯೋ ನಡೆಸುವ ಮಧ್ಯೆ ವಾಗ್ವಾದ ನಡೆದಿದ್ದು, ಇದರ ಮುಂದುವರಿದ ಭಾಗವಾಗಿ ಹಲ್ಲೆ ನಡೆದಿತ್ತೆನ್ನಲಾಗಿದೆ.




