ಕಾಸರಗೋಡು: ಗಡಿನಾಡು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದ ಪ್ರಥಮ ವಾರ್ಷಿಕೋತ್ಸವ ಡಿ.26 ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಬೆಳಗ್ಗೆ 7ರಿಂದ ಭಜನೆ, 10ಕ್ಕೆ ಯಕ್ಷಗಾನ ಮುಂದಿನ ಪೀಳಿಗೆಗೆ ಹಸ್ತಾಂತರ ಯೋಜನೆಯನ್ವಯ ಪ್ರತಿಷ್ಠಾನದ ಮಕ್ಕಳ ತಂಡದ ಯಕ್ಷಗಾನ ತಾಳಮದ್ದಳೆ ಜರಗಲಿದೆ. ಮಧ್ಯಾಹ್ನ 2ರಿಂದ ಪ್ರತಿಷ್ಠಾನದ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾರ್ಥಿಗಳ ರಂಗ ಪ್ರವೇಶ-ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಪ್ರತಿಷ್ಠಾನದ ಯಕ್ಷಗಾನ ಗುರು, ಪ್ರಸಿದ್ಧ ಯಕ್ಷಗಾನ ಕಲಾವಿದ ಲಕ್ಷ್ಮಣ ಕುಮಾರ್ ಮರಕಡ ಅವರು ನಿರ್ದೇಶನದಲ್ಲಿಯಕ್ಷಗಾನ ಪ್ರದರ್ಶನಗೊಳ್ಳುವುದು. ಸಂಜೆ4ಕ್ಕೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡುವರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಚಿಕ್ಕ ಕಬ್ಬಾರ ಹಾವೇರಿ ಜಿಲ್ಲೆ ಇದರ ಗೌರವಾಧ್ಯಕ್ಷ ಶೇಖರ ಗೌಡ ಪಾಟೀಲ ಅದ್ಯಕ್ಷತೆ ವಹಿಸುವರು. ಶಾಸಕ ಎನ್ .ಎ .ನಲ್ಲಿಕುನ್ನು, ಬಹುಭಾಷಾ ವಿದ್ವಾಂಸ ಮಂಡ್ಯದ ಕೊಕ್ಕಡ ವೆಂಕಟ್ರಮಣ ಭಟ್, ಡಾ. ಪ್ರಭು ಸ್ವಾಮಿ ಹಾಳೇವಾಡಿ ಮಠ, ಡಾ. ಎಸ್ ಹನುಮಂತಪ್ಪ ಹಾವೇರಿ, ಶ್ರೀಧರ ಶೆಟ್ಟಿ ಮುಟ್ಟಂ, ಗೋಪಾಲ ಶೆಟ್ಟಿ ಅರಿಬೈಲು, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಗೋಪಿಕಾ ಸತೀಶ ಮಯ್ಯ, ನರಸಿಂಹಮೂರ್ತಿ, ಡಾ. ಗಂಗಯ್ಯ ಕುಲಕರ್ಣಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಮುಕೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭ ಮಧುರ ಉಪಾಧ್ಯ ಬೆಂಗಳೂರು, ಪಣಂಬೂರು ಶಂಕರನಾರಾಯಣ ಕಾರಂತ, ಲಕ್ಷ್ಮಣ ಕುಮಾರ್ ಮರಕಡ ಇವರನ್ನು ಪ್ರತಿಷ್ಠಾನವತಿಯಿಂದ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ ನಂತರ ಪ್ರತಿಷ್ಠಾನದ ಯಕ್ಷಗಾನ ತಂಡದಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.




