ಕಾಸರಗೋಡು: ಶ್ರೀ ಧರ್ಮ ಶಾಸ್ತಾ ಸೇವಾ ಸಂಘ(ರಿ)ಕಾಸರಗೋಡಿನ ಆಶ್ರಯದಲ್ಲಿ ಜರುಗಿದ ನೂತನ ರಜತ ಛಾಯಾಚಿತ್ರ ಪ್ರತಿಷ್ಠೆ ಹಾಗೂ 59 ನೇ ಶಬರಿಮಲೆ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವದ ಸಂದರ್ಭ ಸಮಾಜಸೇವೆಗಾಗಿ ಗೌರವ ಡಾಕ್ಟರೇಟ್ ಪಡೆದ ಡಾ.ಕೆ.ಎನ್. ವೆಂಕಟ್ರಮಣ ಹೊಳ್ಳ ದಂಪತಿಗಳನ್ನು ಎಡನೀರು ಪೀಠಾಧಿಪತಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳವರು ಶಾಲುಹೊದಿಸಿ ಸನ್ಮಾನಿಸಿದರು. ಶಬರಿಮಲೆ ಕಳೆದವರುಷದ ಪ್ರಧಾನ ಅರ್ಚಕರಾದ ತಂತ್ರರತ್ನಂ ಜಯರಾಮ ನಂಬೂದಿರಿಯವರು ಫಲಪುಷ್ಪ, ಪಂದಳ ರಾಜ ಶಂಕರ ವರ್ಮ ಅವರು ಸ್ಮರಣಿಕೆಯನ್ನು ಉತ್ಸವ ಸಮಿತಿ ಅಧ್ಯಕ್ಷ ಸುರಶ್ ಗೌರವ ಪತ್ರ ನೀಡಿ ಗೌರವಿಸಿದರು.





