ಕಾಸರಗೋಡು: ತೂಕ ಮತ್ತು ಅಳತೆ ಮಾಪನ ಇಲಾಖೆಯು ಜಿಲ್ಲೆಯಲ್ಲಿ ರಾತ್ರಿ ವೇಳೆ ತಪಾಸಣೆಗಾಗಿ ಎರಡು ಪ್ರತ್ಯೇಕ ಸ್ಕ್ವಾಡ್‍ಗಳನ್ನು ರಚಿಸಿ ಕಾರ್ಯಾರಂಭ ಮಾಡಿದೆ. ಶಬರಿಮಲೆ-ಕ್ರಿಸ್ಮಸ್-ಹೊಸ ವರ್ಷದ ಆಚರಣೆ ಮತ್ತು ಬೇಕಲ್ ಫೆಸ್ಟ್ ಅನ್ವಯ ವ್ಯಾಪಾರ ಸಂಸ್ಥೆಗಳು ಮತ್ತು ಪೆಟ್ರೋಲ್ ಪಂಪ್‍ಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ತೂಕ ಮತ್ತು ಅಳತೆ ಮಾಪನ ಇಲಾಖೆಯ ಉತ್ತರ ವಲಯ ಜಂಟಿ ನಿಯಂತ್ರಣಾಧಿಕಾರಿ ಪಿ.ಶ್ರೀನಿವಾಸ್ ಅವರ ನಿರ್ದೇಶ ಪ್ರಕಾಟ ಉಪ ನಿಯಂತ್ರಕ ಎಸ್.ಎಸ್‍ಅಭಿಲಾಷ್, ಟಿ.ಕೆ.ಕೃಷ್ಣಕುಮಾರ್ ನೇತೃತ್ವದಲ್ಲಿ ಜಿಲ್ಲೆಯಲ್ಲಿ ತಪಾಸಣಾ ಕಾರ್ಯ ನಡೆದುಬರುತ್ತಿದೆ. ತಪಾಸಣಾ ಕಾರ್ಯದಲ್ಲಿ ಸಹಾಯಕ ನಿಯಂತ್ರಕ ಎಂ.ರತೀಶ್, ಇನ್ಸ್‍ಪೆಕ್ಟರ್ ಗಳಾದ ಶಶಿಕಲಾ, ರಮ್ಯಾ, ವಿದ್ಯಾಧರನ್ ಹಾಗೂ ಸಿಬ್ಬಂದಿ ಪವಿತ್ರನ್, ಶ್ರೀಜಿತ್, ಅಜಿತ್ ಕುಮಾರ್, ಸೀತು ಮೊದಲಾದವರು ಭಾಗವಹಿಸಿದ್ದರು.





