ಮುಳ್ಳೇರಿಯ:ಮುಳಿಯಾರು ಶ್ರೀಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ವಾರ್ಷಿಕ ಷಷ್ಠೀ ಮಹೋತ್ಸವ ಡಿ.7 ಹಾಗೂ 8 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಡಿ.7 ರಂದು ಶನಿವಾರ ಬೆಳಿಗ್ಗೆ ಅಭಿಷೇಕ, ಗಣಹೋಮ, ನವಕಾಭಿಷೇಕ, 10.30ರಿಂದ ವಿಧಾತ್ರಿ ಭಟ್ ಅಬ್ರಾಜೆ ಅವರಿಂದ ಸಂಗೀತಾರ್ಚನೆ, ತುಲಾಭಾರ ಸೇವೆ, 12.30ಕ್ಕೆ ಮಹಾಪೂಜೆ, ಅನ್ನದಾನ,ಸಂಜೆ 6ಕ್ಕೆ ಮೂಡುಮನೆ ಬಳ್ಳುಳ್ಳಾಯ ತರವಾಡಿನಿಂದ ಶ್ರೀವಿಷ್ಣುಮೂರ್ತಿ ದ್ವೆವಗಳ ಭಂಡಾರ ಆಗಮನ, ಸಂಜೆ 6.30ರಿಂದ ನೀಲೇಶ್ವರ ಗಂಗಾಧರ ಮಾರಾರ್ ಮತ್ತು ಬಳಗದವರಿಂದ ತಾಯಂಬಕ, ರಾತ್ರಿ 7ಕ್ಕೆ ಮಹಾಪೂಜೆ, ಶ್ರೀಭೂತಬಲಿ, ರಾಜಾಂಗಣದಲ್ಲಿ ನೃತ್ಯಸೇವೆ, ಕೋಟೂರು ಕಟ್ಟೆ ಸವಾರಿ, ರಾತ್ರಿ 9.30 ರಿಂದ ಮಲ್ಲ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಬಯಲಾಟ, ಡಿ.8 ರಂದು ಬೆಳಿಗ್ಗೆ 10 ರಿಂದ ದರ್ಶನ ಬಲಿ, ಬಟ್ಲು ಕಾಣಿಕೆ, ಮಹಾಪೂಜೆ, ಮಂತ್ರಾಕ್ಷ, ಅನ್ನದಾನ, ಶ್ರೀವಿಷ್ಣುಮೂರ್ತಿ ದೈವಕೋಲ, ರಾತ್ರಿ 7 ರಿಂದ ಶ್ರೀರಂಗಪೂಜೆ ನಡೆಯಲಿದೆ.




.jpg)
