ಮಂಜೇಶ್ವರ: ವರ್ಕಾಡಿ ಕಾವಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠೀ ಮಹೋತ್ಸವ ಡಿ. 5ರಿಂದ 10ರ ವರೆಗೆ ಜರುಗಲಿದೆ. 5ರಂದು ಬೆಳ್ಗೆ 7ಕ್ಕೆ ಗಣಪತಿ ಹೋಮದೊಂದಿಗೆ ಧ್ವಜಾರೋಹಣ ನಡೆಯುವುದು. 6ರಂದು ಪಂಚಮಿ, 7ರಂದು ಷಷ್ಠೀ ಮಹೋತ್ಸವ, 8ರಂದು ಸಪ್ತಮೀ ಉತ್ಸವ ನಡೆಯುವುದು. 9ರಂದು ಬೆಳಗ್ಗೆ ಕವಾಟೋದ್ಘಾಟನೆ, ಸಂಜೆ 5ರಿಂದ ಶ್ರೀದೇವರ ಅವಭೃತ ಸ್ನಾನ, ಧ್ವಜಾವರೋಹಣ, 10ರಂದು ಬೆಳಗ್ಗೆ 8ರಿಂದ ಸಂಪ್ರೋಕ್ಷಣೆ ಕಾರ್ಯಕ್ರಮ ನಡೆಯುವುದು. ಪ್ರತಿ ದಿನ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಶಾಸ್ತ್ರೀಯ ಸಂಗೀತ, ನೃತ್ಯ ವೈಭವ, ನಾಟಕ, ಭಕ್ತಿಗಾನ ಸುಧಾ, ವಿಶ್ವರೂಪದರ್ಶನ, ಯಕ್ಷಗಾನ ಬಯಲಾಟ ನಡೆಯುವುದು.




