ಕಾಸರಗೋಡು : ನಗರದ ಪ್ರಸಿದ್ದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಡಿಸಂಬರ್ 16 ರಿಂದ 19 ರ ತನಕ ಜರಗುವ ಕೋಟಿ ಪಂಚಾಕ್ಷರಿ ಜಪಯಜ್ಞದ ಆಕರ್ಷಣೆಗಾಗಿ ಕ್ಷೇತ್ರ ಪರಿಸರದಲ್ಲಿ ಕೈಲಾಸ ಶಿವನ ಸ್ತಬ್ದ ಚಿತ್ರದ ಅಲಂಕಾರಿಕವನ್ನು ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭ ಶಬರಿಮಲೆ ಕ್ಷೇತ್ರದ ನಿಕಟಪೂರ್ವ ಪ್ರಧಾನ ಅರ್ಚಕ ತಂತ್ರರತ್ನಂ ಬ್ರಹ್ಮಶ್ರೀ ಕೆ. ಜಯರಾಮನ್ ನಂಬೂದಿರಿ, ಶ್ರೀಮೂಲಂನಾಲ್ ಶಂಕರವರ್ಮ ರಾಜ ಪಂದಳ ಅರಮನೆ, ಕ್ಷೇತ್ರ ಟ್ರಸ್ಟ್ ಬೋರ್ಡ್ ಅಧ್ಯಕ್ಷ, ವಕೀಲ ಗೋವಿಂದನ್ ನಾಯರ್, ಕೋಟಿಪಂಚಾಕ್ಷರಿ ಜಪ ಯಜ್ಞ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಕೆ ಎನ್ ವೆಂಕಟ್ರಮಣ ಹೊಳ್ಳ, ರಾಮ್ ಪ್ರಸಾದ್, ಉಪಾಧ್ಯಕ್ಷರಾದ ಅರ್ಜುನ್ ತಾಯಲಂಗಾಡಿ, ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಆರ್, ಕ್ಷೇತ್ರ ಟ್ರಸ್ಟಿ ಉಷಾ ಅರ್ಜುನ್, ಫೆÇೀಟೋ ಪೆÇೀಯಿಂಟ್ ಪ್ರಾಯೋಜಕ, ಉದ್ಯಮಿ ಸುರೇಶ್, ಪ್ರಚಾರ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್, ಸದಸ್ಯರಾದ ವಸಂತ್ ಕೆರೆಮನೆ ಉಪಸ್ಥಿತರಿದ್ದರು.



