ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸನಿಹದ ಶ್ರೀಧರ್ಮಶಾಸ್ತಾ ಸೇವಾ ಸಂಘದ ಆಶ್ರಯದಲ್ಲಿ 59ನೇ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವ ಶ್ರೀಅಯ್ಯಪ್ಪನ್-ವಾವರ ಯುದ್ಧದ ಸನ್ನಿವೇಶದೊಂದಿಗೆ ಸಂಪನ್ನಗೊಂಡಿತು.
ಶುಕ್ರವಾರ ಹರಿನಾಮ ಕೀರ್ತನೆ, ಸಹಸ್ರನಾಮಾರ್ಚನೆ,ಸುರ್ಲು ಶ್ರೀ ಗುಡ್ಡೆ ಮನೆ ತರವಾಡಿಂದ ದೇವಸ್ಥಾನ ವರೆಗೆ ಪಾಲೆಕೊಂಬು ಮೆರವಣಿಗೆ, ಶ್ರೀ ಅಯ್ಯಪ್ಪನ್ ಗೀತಾ, ಶರಣಂವಿಳಿ, ಕನಲ್ ಸೇವಾ, ಪಾಲ್‍ಕಿಂಡಿ ಪ್ರದಕ್ಷಿಣೆಯೊಂದಿಗೆ ಶನಿವಾರ ಬೆಳಗ್ಗೆ ಅಯ್ಯಪ್ಪನ್-ವಾವರ ಯುದ್ಧದ ಸನ್ನಿವೇಶ ನಡೆಯಿತು.
ಬುಧವಾರ ಬೆಳಗ್ಗೆ ಗಣಪತಿ ಹೋಮ, ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದ ಹಸಿರುವಾಣಿ ಸಮರ್ಪಣಾ ಮೆರವಣಿಗೆ, ಶ್ರೀ ಅಯ್ಯಪ್ಪ ದೇವರ ಬೆಳ್ಳಿ ಮೂರ್ತಿ ಸಮರ್ಪಣೆ ನಡೆಯಿತು. ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರಿಂದ ಆಶೀರ್ವಚನ, ಶ್ರೀ ಅಯ್ಯಪ್ಪ ಸ್ವಾಮಿಯ ಭಾವಚಿತ್ರ ಪ್ರತಿಷ್ಠೆ, ನ್ಮಾನ ಸಮಾರಂಭ, ಸಾಂಸ್ಕ್ರತಿಕ ಕಾರ್ಯಖ್ರಮದ ಅಂಗವಾಗಿ ಯಕ್ಷಗಾನ ಬಯಲಾಟ ನಡೆಯಿತು.




