HEALTH TIPS

ಮಧೂರು ದೇವಾಲಯಕ್ಕೆ ಶೀರೂರು ಮಠಾಧೀಶರ ಭೇಟಿ

ಮಧೂರು: ಉಡುಪಿ ಶೀರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದಂಗಳವರ 2026ರ ಪ್ರಥಮ ಪರ್ಯಾಯ ಸಂಚಾರದ ಅಂಗವಾಗಿ ಕುಂಬಳೆ ಸೀಮೆಯ ಅತಿ ಪ್ರಸಿದ್ಧವಾಗಿರುವ ದೇವಾಲಯಗಳಲ್ಲೊಂದಾದ ಕಾಸರಗೋಡು ಸನಿಹದ ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಾಲಯಕ್ಕೆ ಮಂಗಳವಾರ ಭೇಟಿ ನೀಡಿದರು.


ಶ್ರೀ ದೇವಾಲಯದ ಮುಖ್ಯ ಪ್ರತಿಷ್ಠೆ ಶ್ರೀ ಮದನಂತೇಶ್ವರ ಮತ್ತು ಶ್ರೀ ಸಿದ್ಧಿವಿನಾಯಕ ದೇವರ ದರ್ಶನ ಪಡೆದ ಬಳಿಕ, ಭರದಿಂದ ಸಾಗುತ್ತಿರುವ ಸಮಗ್ರ ಜೀರ್ಣೋದ್ಧಾರ ಕಾಮಗಾರಿ ವೀಕ್ಷಿಸಿ ಆಶೀರ್ವಚನ ನೀಡಿದರು. ಶ್ರೀ ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ ಕಾಮತ್, ಕಾರ್ಯದರ್ಶಿ ಜಯದೇವ ಖಂಡಿಗೆ ಅವರು ಶಿರೂರು ಶ್ರೀಗಳನ್ನು ಗೌರವಿಸಿ ಜೀರ್ಣೋದ್ಧಾರ ಕಾಮಗಾರಿ ಮತ್ತು ಕಾಮಗಾರಿ ನಡೆದು ಬಂದ ಹಾದಿ ಬಗ್ಗೆ ವಿವರಿಸಿದರು. ಶ್ರೀ ಮಧೂರು ಕ್ಷೇತ್ರದಲ್ಲಿ 2025 ಮಾರ್ಚ್ 27ರಿಂದ ಎಪ್ರಿಲ್ 7ರ ವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ಕಾರ್ಯಕ್ರಮಕ್ಕೆ ದೇಗುಲ ಸಇದ್ಧಗೊಳ್ಳುತ್ತಿರುವುದಗಿ ಮಾಹಿತಿ ನೀಡಿದರು.  ಈ ಸಂದರ್ಭ ಶ್ರೀ ದೇವಾಲಯದ ಪ್ರಧಾನ ಅರ್ಚಕರು, ಸಿಬ್ಬಂದಿ,  ಸಮಿತಿಯ ಇತರ ಸದಸ್ಯರೂ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries