HEALTH TIPS

ಸಂಘಟಿತ ಶಕ್ತಿಯಿಂದ ಧರ್ಮ ಜಾಗೃತಿ-ಧನುಪೂಜಾ ದಶಮಾನೋತ್ಸವದಲ್ಲಿ ಹಾರಿಕಾ ಮಂಜುನಾಥ್

ಕಾಸರಗೋಡು : ಹಿಂದೂ ಸಮಾಜ ಸಂಘಟಿತವಾಗಿದ್ದರೆ ಮಾತ್ರ ಧರ್ಮ ಜಾಗೃತಿಯಾಗಲು ಸಾಧ್ಯ ಎಂದು ಪ್ರಸಿದ್ಧ ವಾಗ್ಮಿ ಹಾರಿಕಾ ಮಂಜುನಾಥ್ ತಿಳಿಸಿದ್ದಾರೆ.  ಅವರು ಕಾಸರಗೋಡು ದೇವರಗುಡ್ಡೆ ಶ್ರೀ ಶೈಲ ಮಹಾದೇವ ದೇವಸ್ಥಾನದಲ್ಲಿ ಧನುಪೂಜಾ ಮಹೋತ್ಸವದ ದಶಮಾನೋತ್ಸವ ಸಂಭ್ರಮದ ಹಾಗೂ ಡಿಸಂಬರ್ 15 ರಿಂದ 2025 ಜನವರಿ14 ರ ತನಕ ನಡೆಯಲಿರುವ ಧನುಪೂಜಾ ಮಹೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.   


ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು. ಪ್ರಸಿದ್ಧ ನೇತ್ರತಜ್ಞ ಹಾಗೂ ಧಾರ್ಮಿಕ ಮುಂದಾಳು ಡಾ. ಅನಂತ ಕಾಮತ್   ಅಧ್ಯಕ್ಷತೆ ವಹಿಸಿದ್ದರು. ಧನುಪೂಜಾ ಸಮಿತಿ ಗೌರವಾಧ್ಯಕ್ಷ ಡಾ. ಜಯಪ್ರಕಾಶ್ ನಾಯ್ಕ್, ಧನುಪೂಜಾ ಸಮಿತಿ ಅಧ್ಯಕ್ಷ, ವಕೀಲ ಸದಾನಂದ ರೈ, ಶ್ರೀಶೈಲ ಮಹದೇವ ಸೇವಾ ಟ್ರಸ್ಟ್ ಅಧ್ಯಕ್ಷ ಸುಭಾಷ್ ಪಾಟಾಳಿ, ಧನುಪೂಜಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ದಿನೇಶ್.ಎಂ.ಟಿ ಮೊದಲಾದವರು ಉಪಸ್ಥಿತರಿದ್ದರು. ಶ್ರೀ ಮಹಾದೇವ ಸೇವಾ ಟ್ರಸ್ಟ್ ಪ್ರಧಾನಕಾರ್ಯದರ್ಶಿ ನಿಶಾಂತ್ ಗಂಗೆ ಸ್ವಾಗತಿಸಿದರು. ಸೇವಾಟ್ರಸ್ಟ್ ಎಕ್ಸಿಕ್ಯೂಟಿವ್ ಸದಸ್ಯ ಗಣೇಶ್ ಗಟ್ಟಿ ಮನ್ನಿಪ್ಪಾಡಿ ವಂದಿಸಿದರು.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries