ಮಧೂರು: ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ದೇವಸ್ಥಾನದಲ್ಲಿ ಅಯ್ಯಪ್ಪ ಭಜನೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ಸಂಪನ್ನಗೊಂಡಿತು. ಮಧ್ಯಾಹ್ನ ಮಹಾಪೂಜೆ ಮತ್ತು ಅಯ್ಯಪ್ಪ ಭಿಕ್ಷೆಗೆ ಊರ ಪರವೂರಿನ ನೂರಾರು ಭಕ್ತಜನರು,ಅಯ್ಯಪ್ಪ ವ್ರತಧಾರಿಗಳು ಆಗಮಿಸಿ ಪುನೀತರಾದರು.
ನೆಲ್ಲಿಕಟ್ಟೆ ರಾಗಮಾಲಿಕ ತಂಡದ ಶ್ರೀದೇವಿ ಮತ್ತು ಬಳಗದವರಿಂದ ಸಂಗೀತ ರಸಮಂಜರಿ ಉತ್ಸವಕ್ಕೆ ಭಕ್ತಿಸಾಂದ್ರವಾದ ಮೆರುಗನ್ನು ನೀಡಿತು. ಸಂಜೆ 6 ಕ್ಕೆ ಭಜನೆ ಪ್ರಾರಂಭವಾಗಿ ರಾತ್ರಿ 9 ಕ್ಕೆ ಮಹಾಪೂಜೆ ಮತ್ತು ಮಂಗಳಾರತಿಯೊಂದಿಗೆ ದೀಪ ವಿಸರ್ಜಿಸಲಾಯಿತು. ಬಳಿಕ ಅಯ್ಯಪ್ಪ ಭಿಕ್ಷೆಯೊಂದಿಗೆ ಸಮಾಪ್ತಿಯಾಯಿತು.

.jpg)

