ಮಧೂರು : ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ಧ ಹಾಗೂ ಪುರಾತನ ದೇವಾಲಯಗಳಲ್ಲಿ ಒಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪಸೇವೆಯ ಯಶಸ್ಸಿಗಾಗಿ ಮುಂಬಯಿ ಸಮಿತಿ ರಚನಾ ಸಬೆ ಮುಂಬಯಿ ಕುರ್ಲಾದ ಬಂಟರ ಭವನ ಸಭಾಂಗಣದಲ್ಲಿ ಜರುಗಿತು.
ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಸಭೆ ನಡೆಯಿತು. ಉದ್ಯಮಿ, ಕೊಡುಗೈದಾನಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪಸೇವೆಯ ವಿಜ್ಞಾಪನಾ ಪತ್ರವನ್ನು ಶ್ರೀ ಯೋಗಾನಂದ ಸರಸ್ವತೀ ಸವಾಮೀಜಿ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಬಿ.ಕೆ ಮಧೂರು ಅವರು ದೇವಸ್ಥಾನದ ಚರಿತ್ರೆ ಬಗ್ಗೆ ಮಾಹಿತಿ ನೀಡಿದರು.ಉದ್ಯಮಿಗಳಾದ ಕೆ.ಕೆ ಶೆಟ್ಟಿ, ರಘುರಾಮ ಶೆಟ್ಟಿ, ತಿಂಬರೆ ಸಂಜೀವ ಶೆಟ್ಟಿ, ಕುದ್ರೆಪ್ಪಾಡಿಗುತ್ತು ಕಲ್ಪನಾಕೃಷ್ಣ ಶೆಟ್ಟಿ, ಆರ್.ಕೆ ಶೆಟ್ಟಿ, ತೀಯಾ ಸಮಾಜದ ಬಾಬು ಬೆಳ್ಚಾಡ, ಕೊಂಡೆವೂರು ಸಮಿತಿ ಮುಂಬಯಿಘಟಕದ ರಾಜೇಶ್, ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳಾದ ಜಯದೇವ ಖಂಡಿಗೆ, ಮಂಜುನಾಥ ಕಾಮತ್, ಕಾರ್ತಿಕ್ ಶೆಟ್ಟಿ, ಸಂತೋಷ್‍ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ದಯಾಸಾಗರ್ ಚೌಟ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
2025ರ ಮಾ. 27ರಿಂದ ಏ. 7ರ ವರೆಗೆ ಬ್ರಹ್ಮಕಲಶೋತ್ಸವ ಜರುಗಲಿದ್ದು, ಏ. 5ರಂದು ಮೂಡಪ್ಪ ಸಏವೆ ನಡೆಯುವುದು.





