ಮುಳ್ಳೇರಿಯ: ಬೆಳ್ಳೂರು ನೆಟ್ಟಣಿಗೆ ಮುಂಡೂರು ನಿವಾಸಿ ಕೃಷ್ಣನ್ ಚೆಟ್ಟಿಯಾರ್(64)ಅವರ ಮೃತದೇಹ ಮನೆ ಸನಿಹದ ಬಾವಿಯಲ್ಲಿ ಪತ್ತೆಯಾಗಿದೆ. ಸೋಮವಾರ ಬೆಳಗ್ಗೆ ಮನೆಯಿಂದ ನಾಪತ್ತೆಯಾಗಿದ್ದ ಇವರನ್ನು ಹುಡುಕುವ ಮಧ್ಯೆ ಬಾವಿಯಲ್ಲಿ ಬಿದ್ದಿರುವುದು ಕಂಡುಬಂದಿತ್ತು. ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಮೇಲಕ್ಕೆತ್ತಿದರೂ ಸಾವು ಸಂಭವಿಸಿತ್ತು. ಆರ್ಥಿಕ ಸಮಸ್ಯೆಯಿಂದ ಆತ್ಮಹತ್ಯೆಗೆ ಶರಣಾಗಿರಬೇಕೆಂದು ಸಂಶಯಿಸಲಾಗಿದೆ. ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.





