ಮಂಜೇಶ್ವರ: ವರ್ಕಾಡಿ ಮುಡಿಮಾರು ಶ್ರೀ ಮಲರಾಯ ಮತ್ತು ಗುಳಿಗ ದೈವಸ್ಥಾನದ 12ನೇ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಧಾರ್ಮಿಕ ವಿಧಿ ವಿಧಾನಗಳು. ನೇಮೋತ್ಸವ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಡಿ. 26ರಂದುಜರುಗಲಿದೆ. ಬೆಳಿಗ್ಗೆ 9ಕ್ಕೆ ಬಡಾಜೆ ಬೂಡು ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಮಹಾಗಣಪತಿ ಹೋಮ, ಶುದ್ಧ ಕಲಶ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಮಧ್ಯಾಹ್ನ ಶ್ರೀ ಮಲರಾಯ ದೈವದ ನೇಮೋತ್ಸವ ನಂತರ ಗುಳಿಗ ನೇಮೋತ್ಸವ,ರಾತ್ರಿ 9ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಮಕ್ಕಳಿಂದ ವಿವಿಧ ನೃತ್ಯಾವಳಿ ಕಾರ್ಯಕ್ರಮ, ನಂತರ ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಮುಡಿಮಾರು ಇದರ ಪ್ರಯೋಜಕತ್ವದಲ್ಲಿ ಶ್ರೀ ಶಾರದಾ ಆಟ್ರ್ಸ್ ಕಲಾವಿದರು ಮಂಜೇಶ್ವರ ಇವರ ಅಭಿನಯದ "ಕಥೆ ಎಡ್ಡೆಂಡು" ಎಂಬ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನ ಗೊಳ್ಳಲಿದೆ.




