ಕೊಚ್ಚಿ: ಆಲಪ್ಪುಳ ಜಿಲ್ಲೆಯ ತರವೂರು ಮಹಾದೇವ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಹಾಗೂ ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷರು ಮೊದಲಾದವರ ಚಿತ್ರವಿರುವ ಫ್ಲಕ್ಸ್ ಬೋರ್ಡ್ ಅಳವಡಿಸಿರುವುದನ್ನು ಹೈಕೋರ್ಟ್ ಟೀಕಿಸಿದೆ.
ದೇವಸ್ವಂ ಮಂಡಳಿ ಅಧ್ಯಕ್ಷರು ದೇವಸ್ಥಾನಗಳ ಉಸ್ತುವಾರಿ ಮತ್ತು ಟ್ರಸ್ಟಿಯೇ ಹೊರತು ಮಾಲೀಕರಲ್ಲ ಎಂದು ಕೋರ್ಟ್ ಟೀಕಿಸಿದೆ.
ಈ ರೀತಿಯ ಫ್ಲಕ್ಸ್ ಏಕೆ ಪ್ರದರ್ಶಿಸಿದ್ದೀರಿ, ಉದ್ದೇಶ ಏನು ಎಂದೂ ದೇವಸ್ವಂ ಪೀಠ ಪ್ರಶ್ನಿಸಿದೆ. ಭಕ್ತರು ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುತ್ತಾರೆ. ಹೊರತು ಸ್ವಾಗತಿಸುವ ಫ್ಲಕ್ಸ್ ಅನ್ನು ನೋಡಲು ಅಲ್ಲ. ಕಾರಣಕರ್ತರು ಅಲ್ಲಿದ್ದ ಫ್ಲಕ್ಸ್ ಅನ್ನು ಏಕೆ ತೆಗೆದಿಲ್ಲ ಎಂದೂ ಕೋರ್ಟ್ ಕೇಳಿದೆ. ಶಬರಿಮಲೆ ದೇಗುಲದಲ್ಲಿ ಈ ರೀತಿ ಫ್ಲಕ್ಸ್ ಹಾಕಲು ಅವಕಾಶ ನೀಡುವಂತಿಲ್ಲ ಎಂದು ಕೋರ್ಟ್ ಹೇಳಿದೆ.
ಫ್ಲಕ್ಸ್‍ಗೆ ವ್ಯಯಿಸುವ ಹಣವನ್ನು ಅನ್ನದಾನಕ್ಕೆ ವಿನಿಯೋಗಿಸಿದರೆ ಅಯ್ಯಪ್ಪ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ನ್ಯಾಯಮೂರ್ತಿ ಅನಿಲ್ ಕೆ ನರೇಂದ್ರನ್ ಹೇಳಿದ್ದಾರೆ.






