ಕೊಚ್ಚಿ: ದೈಹಿಕ ವಿಕಲಚೇತನ ಯಾತ್ರಾರ್ಥಿಗಳಿಗೆ ಶಬರಿಮಲೆಯಲ್ಲಿ ಡೋಲಿ ಸೌಲಭ್ಯ ಕಲ್ಪಿಸುವಂತೆ ದೇವಸ್ವಂ ಮಂಡಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ತಿರುವನಂತಪುರಂ ಪಾಲೋಟ್ ನಿವಾಸಿ ವಿಶೇಷ ಚೇತನರಾದ ಸಜೀವ್ ಅವರಿಗೆ ಪೋಲೀಸ್ ಡೋಲಿ ನಿರಾಕರಿಸಿದ ಪ್ರಕರಣದಲ್ಲಿ ನ್ಯಾಯಮೂರ್ತಿ ಅನಿಲ್ ಕೆ. ನರೇಂದ್ರನ್, ನ್ಯಾಯಮೂರ್ತಿ ಎಸ್. ಮುರಳಿಕೃಷ್ಣ ಮತ್ತು ಇತರರನ್ನು ಒಳಗೊಂಡ ದೇವಸ್ವಂ ಪೀಠ ಈ ಆದೇಶ ನೀಡಿದೆ.
ಅಂಥವರಿಗೆ ದೇವರ ಸುಗಮ ದರ್ಶನ ವ್ಯವಸ್ಥೆ ಮಾಡಬೇಕು. ಇದನ್ನು ಪೋಲೀಸರು ಮತ್ತು ದೇವಸ್ವಂ ಮಂಡಳಿ ಖಚಿತಪಡಿಸಿಕೊಳ್ಳಬೇಕು. ಅಂಗವಿಕಲರ ವಾಹನಗಳು ನಿಲುಗಡೆ ದಾಟಿದ ಕೂಡಲೇ ಪೋಲೀಸರು ಪಂಬಾಗೆ ಮಾಹಿತಿ ರವಾನಿಸಬೇಕು. ಅದರಂತೆ ಅಗತ್ಯ ಡೋಲಿಗಳನ್ನು ಸಿದ್ಧಪಡಿಸಬೇಕು. ದೈಹಿಕ ಅಸಾಮಥ್ರ್ಯ ಹೊಂದಿರುವ ಭಕ್ತರಿಗೆ ಬೆಟ್ಟ ಹತ್ತಲು ಎಲ್ಲ ರೀತಿಯ ಸೌಲಭ್ಯ ಕಲ್ಪಿಸಬೇಕು ಮತ್ತು ಈ ವಿಚಾರಗಳಲ್ಲಿ ಪೋಲೀಸರು ಮತ್ತು ದೇವಸ್ವಂ ಮಂಡಳಿಯ ವೈಫಲ್ಯವಾಗಬಾರದು ಎಂದು ನ್ಯಾಯಾಲಯ ಹೇಳಿದೆ.
ನಿನ್ನೆ ಸಜೀವ್ ಅವರಿಗೆ ಡೋಲಿ ನಿರಾಕರಿಸಿದ್ದಕ್ಕಾಗಿ ನ್ಯಾಯಾಲಯವು ಮಂಡಳಿಗೆ ವಿವರಣೆಯನ್ನು ಕೇಳಿತ್ತು. ಸಜೀವ್ ಕುಳಿತಿದ್ದ ಜಾಗಕ್ಕೆ ಡೋಲಿ ತೆಗೆದುಕೊಂಡು ಹೋಗದಂತೆ ಪೋಲೀಸರು ತಡೆದಿದ್ದÀರು. ನಡುರಸ್ತೆಯಲ್ಲಿ ಮಲಗುತ್ತೇನೆ ಎಂದು ಸಜೀವನ್ ಹೇಳಿದಾಗ ಡೋಲಿ ಕಳಿಸಲಾಯಿತು. ಭಕ್ತನಿಗೆ ಬೆಟ್ಟ ಹತ್ತಲು ಡೋಲಿ ಸಿಕ್ಕಿಲ್ಲ ಎಂದು ವಿಶೇಷ ಆಯುಕ್ತರು ವರದಿ ನೀಡಿದ್ದರು. ಇದನ್ನು ಅನುಸರಿಸಿ ನ್ಯಾಯಾಲಯದಿಂದ ಕಟ್ಟುನಿಟ್ಟಿನ ಸೂಚ£ಗಳನ್ನು ನೀಡಲಾಯಿತು.



