ಕಾಸರಗೋಡು: ಮಾರಕಾಯುಧಗಳೊಂದಿಗೆ ಸಂಚರಿಸುತ್ತಿದ್ದ ಸಂದರ್ಭ ಪೊಲೀಸ್ ಕಾರ್ಯಾಚರಣೆವೇಳೆ ಪರಾರಿಯಾಗಿದ್ದ ಬಂಟ್ವಾಳ ಪುದು ನಿವಾಸಿ ಸಾದತ್‍ಆಲಿ ಎಂಬಾತನನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಠಾಣೆ ಪೊಲೀಸರಿಂದ ಬಂಧಿತನಾಗಿ, ನ್ಯಾಯಾಂಗ ಬಂಧನ ಅನುಭವಿಸುತ್ತಿದ್ದ ಸಾದತ್‍ಆಲಿಯನ್ನು ಮಂಜೇಶ್ವರ ಠಾಣೆ ಪೊಲೀಸರು ಮಂಗಳೂರಿನ ಕಾರಾಗೃಹದಿಂದ ವಶಕ್ಕೆ ತೆಗೆದುಕೊಂಡಿದ್ದರು.
ನ. 10ರಂದು ಮಾರಕಾಯುಧಗಳೊಂದಿಗೆ ಕಾರಿನಲ್ಲಿ ಸಂಚರಿಸುತ್ತಿದ್ದ ತುಮಕೂರು ಜಿಲ್ಲೆ ಸಿರಾ ಗ್ರಾಮದ ಸಯೀದ್ ಅಮನ್, ಉಳ್ಳಾಲ ಕೋಡಿ ಹೌಸ್ ನಿವಾಸಿ ಫೈಸಲ್ ಎಂಬವರನ್ನು ನಾಗರಿಕರ ಸಹಾಯದಿಂದ ಮಂಜೇಶ್ವರ ಠಾಣೆ ಪೊಲೀಸರು ವಶಕ್ಕೆ ತೆಗದುಕೊಂಡಿದ್ದರು. ಈ ಸಂದರ್ಭ ಸಾದತ್‍ಆಲಿ ಪರಾರಿಯಾಗಿದ್ದನು. ಇದೇ ತಂಡದ ಇನ್ನೊಬ್ಬ ಆರೋಪಿ ಕಡಬ ನಿವಾಸಿ ಇಬ್ರಾಹಿಂ ಕಲಂದರ್‍ನನ್ನು ಈ ಹಿಂದೆ ಬಂಧಿಸಲಾಗಿದೆ.






