ಕಾಸರಗೋಡು : ರಾಷ್ಟ್ರೀಯ ವಿಶ್ವಕರ್ಮ ಫೆಡರೇಶನ್ (ಎನ್‍ವಿಎಫ್) ರಾಷ್ಟ್ರೀಯ ಸಮ್ಮೇಳನ ಮತ್ತು ಜಿಲ್ಲಾ ಕುಟುಂಬ ಸಂಗಮ ಕಾಸರಗೋಡು ನಗರಸಭಾಂಗಣದಲ್ಲಿ ಜರುಗಿತು. ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಸ್ವಾಮಿಗಳು ಸಮಾವೇಶ ಉದ್ಘಾಟಿಸಿ ಆಶೀರ್ವಚನ ನೀಡಿದರು.
ರಾಷ್ಟ್ರೀಯ ವಿಶ್ವಕರ್ಮ ಫೆಡರೇಶನ್ (ಎನ್‍ವಿಎಫ್) ರಾಷ್ಟ್ರೀಯ ಅಧ್ಯಕ್ಷ ಎಂ.ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ರಾಘವನ್ ದೊಡ್ಡವಯಲ್, ರಾಜ್ಯಾಧ್ಯಕ್ಷ ಸಿ.ಕೆ.ಅಂಬಿ, ರಾಷ್ಟ್ರೀಯ ಉಪಾಧ್ಯಕ್ಷೆ ಶಶಿ ಪಾಕರ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಘವನ್ ಕೊಳತ್ತೂರು, ಜಿಲ್ಲಾ ಜಿಲ್ಲಾ ಕಾರ್ಯದರ್ಶಿ ಶ್ಯಾಮಲಾ ಸೂರ್ಯನ್‍ರಾಜ್ಯ ಉಪಾಧ್ಯಕ್ಷರಾದ ಖಾಜಾಂಜಿ ಪಿ.ಕೆ.ವಿಜಯನ್ ವರದಿ ಮಂಡಿಸಿದರು. ರಾಜ್ಯ ಉಪಾಧ್ಯಕ್ಷ ವಿಷ್ಣು ಆಚಾರ್ಯ, ಸತೀಶ ಕಾನಡುಕ್ಕರ, ಸುಮೇಶ್ ವಲ್ಲಚಿರ, ಸಂತೋಷ್ ಕಯ್ಯೂರ್, ನಿಶಾ ಚಂದ್ರನ್, ಕೆ.ಎಂ.ಗೀತಾ ತ್ರಿಶೂರ್, ಶ್ರೀಪ್ರಿಯಾ ಪಾಲಕ್ಕಾಡ್, ಕೆ.ಜಯಶೀಲನ್, ಕೆ.ಪುರುಷೋತ್ತಮ ಆಚಾರ್ಯ, ಎ.ಕೆ.ರಾಮಕೃಷ್ಣನ್, ಗೋಪಾಲಕೃಷ್ಣನ್ ತೃಶ್ಯೂರ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ ವಿವಿಧ ಠರಾವು ಮಂಡಿಸಲಾಯಿತು. ಎನ್‍ವಿಎಫ್‍ನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸೀತಾರಾಮ ಆಚಾರ್ಯ ರಾಷ್ಟ್ರೀಯ ಅಧ್ಯಕ್ಷ, ರಾಘವನ್ ಕೊಳತ್ತೂರು ಪ್ರಧಾನ ಕಾರ್ಯದರ್ಶಿ, ಸುಮೇಶ ವಲ್ಲಚಿರ ಕೋಶಾಧಿಕಾರಿ, ವಿಷ್ಣು ಆಚಾರ್ಯ ಜಿಲ್ಲಾ ಸಮಿತಿ ಅಧ್ಯಕ್ಷ, ನಿಶಾ ಚಂದ್ರನ್ ಜಿಲ್ಲಾ ಕಾರ್ಯದರ್ಶಿ ಹಾಗೂ ಓಮನಾ ಅಂಬಿ ಅವರನ್ನು ಕೋಶಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಯಿತು.





