ಕುಂಬಳೆ: ಮೊಗ್ರಾಲ್ ಪುತ್ತೂರು ಗ್ರಾಮದ ಅಡ್ಕತ್ತಬೈಲುನಲ್ಲಿರುವ ಕೋಟ್ಟವಳಪ್ಪಿನಲ್ಲಿ `ಅಮ್ಮ ಭಾರತ ಚಾರಿಟಿ ಫೌಂಡೇಶನ್' (ಎ.ಬಿ.ಸಿ.ಫೌಂಡೇಶನ್) ನಿರ್ಮಿಸಿ ಕೊಡುವ ಹೊಸ ಮನೆಗೆ ದಾರಂದ ಸ್ಥಾಪನಾ ಸಮಾರಂಭ ಇತ್ತೀಚೆಗೆ ನಡೆಯಿತು. ಪ್ರಮುಖ ಪ್ರವಾಸಿ ಉದ್ಯಮಿಗಳು ಮತ್ತು ಸಾಮಾಜಿಕ, ಸಾಂಸ್ಕøತಿಕ, ಧಾರ್ಮಿಕ ಕ್ಷೇತ್ರದಲ್ಲಿ ಖ್ಯಾತ ವ್ಯಕ್ತಿಗಳಾದ ವಿಜಯನ್ ರಾಮನ್ ಕರಿಪ್ಪೊಡಿ, ಖತ್ತರ್ ಕೃಷ್ಣನ್ ಕುನ್ನಿಲ್ ನೀರ್ಚಾಲು ಇವರ ಉಪಸ್ಥಿತಿಯಲ್ಲಿ ನಡೆದ ಈ ಸಮಾರಂಭದಲ್ಲಿ ಅಮ್ಮ ಭಾರತ ಚಾರಿಟಿ ಫೌಂಡೇಶನ್ ಅಧ್ಯಕ್ಷ ಗಣೇಶ್ ಅರಮಂಗಾನಂ, ತಳಂಗರೆ ಪುಲಿಕುಂಜೆ ಭಗವತಿ ಸೇವಾ ಸಂಘದ ಅಧ್ಯಕ್ಷ ಎನ್.ಸತೀಶನ್ ಮನ್ನಿಪ್ಪಾಡಿ, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯಿತಿ ಸ್ಥಾಯೀ ಸಮಿತಿಯ ಅಧ್ಯಕ್ಷೆ ಪ್ರಮೀಳಾ ಮಜಲ್, ಅಮ್ಮ ಭಾರತ್ ಚಾರಿಟಿ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಗಣೇಶ್ ಮಾವಿನಕಟ್ಟೆ, ಕೋಶಾಧಿಕಾರಿ ಸುರೇಶ್ ಬಾಬು ಕಾನತ್ತೂರು, ಟ್ರಸ್ಟ್ ಸದಸ್ಯೆ ಶರಣ್ಯ ಗಣೇಶ್ ಕೋಟೆಕಣಿ, ಗಣೇಶ್ ಅಡ್ಕತ್ತಬೈಲು, ಪದ್ಮನಾಭ ನಾಯಕ್, ರಾಜನ್ ಪೂಚ್ಚಕಾಡ್ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಂಡರು.




.jpg)
