ಪೆರ್ಲ : ಶೇಣಿ ಮಣಿಯಂಪಾರೆಯ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ 28ನೇ ವಾರ್ಷಿಕೋತ್ಸವ ಡಿ.25ಕ್ಕೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಬೆಳಗ್ಗೆ ಗಂಟೆ 8.30 ಕ್ಕೆ ಗಣಪತಿ ಹವನ, 9.30ಕ್ಕೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12 ಕ್ಕೆ ಮಂಗಳಾರತಿ,ಪ್ರಸಾದ ವಿತರಣೆ ಜರಗಲಿದೆ. ಸಂಜೆ ಗಂಟೆ 6.30ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿ ಮಹಿಳಾ ಭಜನಾ ಮಂಡಳಿಯಿಂದ ಭಜನೆ, ರಾತ್ರಿ 7 ಕ್ಕೆ ಮಣಿಯಂಪಾರೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಿಂದ ಉಲ್ಪೆ ಮೆರವಣಿಗೆ ಜರಗಲಿದೆ. ಈ ಸಂದರ್ಭದಲ್ಲಿ ತತ್ವಮಸಿ ಕುಣಿತ ಭಜನಾ ತಂಡ ಹಾಗೂ ಶ್ರೀಶಾರದ ಕುಣಿತ ಭಜನಾ ತಂಡ ಏಳ್ಕಾನ ಇವರಿಂದ ಕುಣಿತ ಭಜನೆ ಜರಗಲಿದೆ. 7.40ರಿಂದ ಶ್ರೀ ದೇವಿ ಭಜನಾ ಸಂಘ ದಳ ಕಲ್ಲಡ್ಕ ಇವರಿಂದ ಭಜನೆ ಜರಗಲಿದೆ.ರಾತ್ರಿ 9.30ಕ್ಕೆ ಮಹಾಮಂಗಳಾರತಿ ಪ್ರಸಾದ ವಿತರಣೆ ಬಳಿಕ 10 ಗಂಟೆಯಿಂದ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರಗಲಿದೆ.

