ಪೆರ್ಲ : ಉಕ್ಕಿನಡ್ಕದ ಯೇಸುವಿನ ಪವಿತ್ರ ಹೃದಯದ ದೇವಾಲಯ ವತಿಯಿಂದ ಈ ವರ್ಷದ ಕ್ರಿಸ್ಮಸ್ ಹಬ್ಬವನ್ನು ಸಾಮಾಜಿಕ ಸೌಹರ್ಧತೆಗಾಗಿ ನಡೆಸಿರುವುದು ಗಮನಾರ್ಹವಾಗಿದೆ.
ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಎಣ್ಮಕಜೆ ಗ್ರಾಮ ಪಂಚಾಯತಿ, ಕುಂಬ್ಡಾಜೆ ಗ್ರಾಮ ಪಂಚಾಯತಿ, ಬದಿಯಡ್ಕ ಗ್ರಾಮ ಪಂಚಾಯತಿ ಕಚೇರಿ ಹಾಗೂ ಬದಿಯಡ್ಕ ಪೋಲಿಸ್ ಠಾಣೆ, ಅಬಕಾರಿ ಕಚೇರಿ, ವಿದ್ಯುತ್ ಇಲಾಖೆ, ಉಕ್ಕಿನಡ್ಕ ಸಹಸ್ರಾಕ್ಷ ಆಯುರ್ವೇದ ಆಸ್ಪತ್ರೆ, ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಹಾಗೂ ಉಕ್ಕಿನಡ್ಕ ಮಸೀದಿಗೆ ತೆರಳಿ ಕ್ರಿಸ್ಮಸ್ ಕೇಕ್ ವಿತರಿಸಿ ಸೌಹರ್ದತೆಯ ಸಂದೇಶ ಸಾರಲಾಯಿತು.
ಇಗರ್ಜಿಯ ಧರ್ಮಗುರುಗಳಾದ ವಂದನೀಯ ಫಾದರ್ ಸುನಿಲ್ ಮಿರಾಂದಾ ನೇತೃತ್ವವಹಿಸಿದ್ದರು. ಪಾಲನ ಸಮಿತಿಯ ಉಪಾಧ್ಯಕ್ಷ ಜೊಯೆಲ್ ಮೊಂತೆರೋ, ಕಾರ್ಯದರ್ಶಿ ಸರಿಣಿ ಕ್ರಾಸ್ತಾ, ಸದಸ್ಯರಾದ ವಿಲ್ಫ್ರೆಡ್ ಡಿಸೋಜ, ಪಾವ್ಲ್ ಡಿಸೋಜ, ವಿವಿಧ ಇಲಾಖೆಗಳಿಗೆ ಭೇಟಿ ನೀಡಿದರು.

.jpg)
.jpg)
.jpg)
