ಮಂಜೇಶ್ವರ : ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ 80ರ ಹರೆಯದ ವೃದ್ಧೆಗೆ ಜಪ್ತಿ ನೋಟಿಸ್ ನೀಡುವ ಮೂಲಕ ವಾಟರ್ ಅಥೋರಿಟಿ ಅಮಾನವೀಯತೆಯನ್ನು ಮೆರೆದಿರುವುದು ತೀವ್ರ ಚರ್ಚೆಗೊಳಗಾಗಿದೆ.
ಕೇರಳ ಜಲ ಪ್ರಾಧಿಕಾರದ ಪೈಪ್ ಲೈನ್ ನೀರನ್ನು ಬಳಸದೆ ಇರುವ ಯಮುನಾರಿಗೆ 17725 ರೂ.ಗಳ ಬಿಲ್ ಪಾವತಿಸುವಂತೆ ನೋಟಿಸ್ ಕಳುಹಿಸಿದ್ದಲ್ಲದೆ, ಬಿಲ್ ಪಾವತಿಸದ ವೃದ್ಧೆಗೆ ಇದೀಗ ಜಪ್ತಿ ನೋಟೀಸನ್ನು ನೀಡಲಾಗಿದೆ. ಮಂಜೇಶ್ವರ ತಾಲೂಕು ಡೆಪ್ಯುಟಿ ತಹಸಿಲ್ದಾರ್ ಪ್ರಶಾಂತನ್. ವಿ ಇದೀಗ ಜಪ್ತಿ ನೋಟಿಸನ್ನು ಜಾರಿ ಮಾಡಿದ್ದು, ಏಕಾಂಗಿ ಜೀವ ವಯೋವೃದ್ದೆ ಯಮುನಾ ಇದೀಗ ಕಂಗಾಲಾಗಿದ್ದಾರೆ.
ಯಮುನಾರವರು ಏಕಾಂಗಿ ಹಾಗೂ ವಿಧವೆಯಾಗಿದ್ದು, ಮಕ್ಕಳಿಲ್ಲದೆ ತನ್ನ ಸಂಬಂಧಿಯ ಮನೆಯಲ್ಲಿ ವಾಸವಾಗಿದ್ದಾರೆ. ಇವರು ವಾಟರ್ ಅಥಾರಿಟಿಯ ಒಂದು ಬಾಟಲ್ ನೀರು ಕೂಡ ಉಪಯೋಗಿಸಿಲ್ಲವೆಂದು ಹೇಳುತ್ತಿದ್ದಾರೆ.
ಇದು ಕೇವಲ ಯಮುನಾರವರ ಒಬ್ಬರದ್ದೆ ಸಮಸ್ಯೆಯಲ್ಲ, ಮಂಜೇಶ್ವರ ತಾಲೂಕು ವ್ಯಾಪ್ತಿಯ ನೂರಾರು ಕುಟುಂಬಗಳು ಜಲ ಪ್ರಾಧಿಕಾರದ ಈ ಎಡವಟ್ಟಿನಿಂದ ಜಪ್ತಿಕ್ರಮದ ಭೀತಿಯನ್ನು ಎದುರಿಸುತ್ತಿರುವುದಾಗಿ ತಿಳಿದುಬಂದಿದೆ.
ವರ್ಕಾಡಿ ತಚ್ಚಿರೆಯ ಅಬ್ದುಲ್ ಖಾದರ್ ಅವರಿಗೆ 53 ಸಾವಿರ ರೂ. ಬಿಲ್ಲು ಬಂದಿದೆ. ವಾಟರ್ ಅಥೋರಿಟಿಯ ಕುಡಿಯುವ ನೀರನ್ನೇ ಬಳಸದೇ ಇರುವ ಕುಟುಂಬಗಳಿಗೆ ಸಾವಿರಾರು ರೂ. ಮೊತ್ತದ ಬಿಲ್ ನ್ನು ವಾಟರ್ ಅಥಾರಿಟಿ ನೀಡಿದ್ದು, ಇದನ್ನು ಪಾವತಿಸಲಾಗದೇ ಬಡ ಕುಟುಂಬಗಳು ಕಂಗಾಲಾಗಿದೆ. ಅಧಿಕೃತರಿಗೆ ಈ ಸಮಸ್ಯೆಯ ಬಗ್ಗೆ ಅದೆಷ್ಟು ಬಾರಿ ಮನವಿ ನೀಡಿದ್ದರೂ ಸಮಸ್ಯೆಗೆ ಯಾವುದೇ ಪರಿಹಾರವನ್ನು ಈ ತನಕವೂ ಕಾಣಲಾಗಲಿಲ್ಲ.
ಕೇರಳ ವಾಟರ್ ಅಥೋರಿಟಿಯ ಪೈಪ್ ಲೈನ್ ಕನೆಕ್ಷನ್ ಯಾರೆಲ್ಲಾ ಪಡೆದುಕೊಂಡಿದ್ದಾರೋ ಅವರಿಗೆಲ್ಲ ಇದೀಗ ಸಂಕಷ್ಟ ಬಂದಿದೆ. ನೀರನ್ನೇ ಉಪಯೋಗಿಸದ ಕುಟುಂಬಗಳಿಗೆ ಸಾವಿರಾರು ರೂ. ಬಿಲ್ ನೀಡಿದ್ದು ಮಾತ್ರವಲ್ಲ ಪಾವತಿಸದ ಆರೋಪಕ್ಕೆ ಜಫ್ತಿ ಕ್ರಮಕ್ಕೂ ಸರ್ಕಾÀದ ಇಲಾಖೆ ಮುಂದಾಗಿರುವುದು ನಿಜಕ್ಕೂ ದುರಂತ.
ಕೇರಳ ಜಲ ಪ್ರಾಧಿಕಾರದ ಕುಂಬಳೆ ಉಪವಿಭಾಗಿಯ ಇಲಾಖೆಯ ಅಧೀನದಲ್ಲಿ ಹಲವಾರು ಪಂಚಾಯತಿಗಳಲ್ಲಿನ ನೂರಾರು ಕುಟುಂಬಗಳಿಗೆ ಈ ಅನ್ಯಾಯವಾಗಿದ್ದು, ಇವರ ಅಳಲನ್ನು ಕೇಳುವವರೇ ಇಲ್ಲವಾಗಿದೆ.
ನೀರನ್ನೇ ಬಳಸದ ನೂರಾರು ಮಂದಿಗೆ ಇದೀಗ ಅನ್ಯಾಯವಾಗಿದ್ದು, ಸರ್ಕಾರ ತಕ್ಷಣವೇ ಸಮಗ್ರ ತನಿಖೆಯನ್ನು ನಡೆಸಿ ವಾಟರ್ ಅಥೋರಿಟಿಯ ಈ ಎಡವಟ್ಟಿಗೆ ಪರಿಹಾರವನ್ನು ಕಾಣಲೇಬೇಕಾಗಿದೆ.
ವಾಟರ್ ಅಥೋರಿಟಿಯ ತಾಂತ್ರಿಕ ಸಮಸ್ಯೆಯಿಂದಾಗಿ ಮಂಜೇಶ್ವರದ ಆಸು ಪಾಸಿನ ನೂರಾರು ಕುಟುಂಬಗಳಿಗೆ ಇದೀಗ ಜಪ್ತಿ ಕ್ರಮದ ನೋಟಿಸು ಜಾರಿ ಮಾಡಲಾಗಿದ್ದು, ಇದನ್ನು ತಕ್ಷಣವೇ ಹಿಂಪಡೆಯಬೇಕು. ಯಾವ ಕಾರಣಕ್ಕೂ ಜಪ್ತಿ ಕ್ರಮಕ್ಕೆ ಸರ್ಕಾರ ಮುಂದಾಗಬಾರದು.
ಇತ್ತೀಚೆಗೆ ಪಂಚಾಯತುಗಳಲ್ಲಿ ವಾಟರ್ ಅಥೋರಿಟಿಯ 'ಅದಾಲತ್' ನಾಟಕ ನಡೆದಿದ್ದು, ಇಲ್ಲಿ ಅರ್ಜಿಯನ್ನು ಸ್ವೀಕರಿಸಿದ್ದು ಬಿಟ್ಟರೆ ಯಾವ ಇತ್ಯರ್ಥವೂ ಆಗಿಲ್ಲವೆಂದು ಜನರು ದೂರಿಕೊಂಡಿದ್ದಾರೆ.
ಕೇಳಿಬಂದ ಅಭಿಪ್ರಾಯಗಳು:
ಇನ್ನು ಮುಂದೆ ವಾಟರ್ ಅಥಾರಿಟಿಯ ಕುಡಿಯುವ ನೀರಿನ ಸಂಪರ್ಕವನ್ನು ಪಡೆಯುವ ಕುಟುಂಬಗಳು ಮುಂದಾಲೋಚನೆ ಮಾಡುವುದು ಒಳಿತು.
ಒಪೆÇ್ಪತ್ತಿನ ಊಟಕ್ಕೂ ಗತಿ ಇಲ್ಲದ, ಬದುಕಿನ ಉತ್ತರಾರ್ಧದಲ್ಲಿರುವ 'ಯಮುನಾ' ಎಂಬ ವಯೋವೃದ್ದೆಗೆ ಸರಕಾರದ ಇಲಾಖೆಯು ಮಾಡುವ ಅನ್ಯಾಯವನ್ನು ಯಾವ ಮನುಷ್ಯ ಜನ್ಮವೂ ಕ್ಷಮಿಸದು.
ಇದೀಗ ಸರ್ಕಾರದ ಜಪ್ತಿ ನೋಟೀಸ್ ಅನ್ನು ಸ್ವೀಕರಿಸಿದ ಯಮುನಾರ ಗೋಳನ್ನು ಕೇಳುವವರೇ ಇಲ್ಲವಾಗಿದೆ. ಯಮುನಾರಂತೆ ನೂರಾರು ಕುಟುಂಬಗಳದ್ದು ಇದೇ ಕಥೆ.
ಸಂಬಂಧಪಟ್ಟ ಅಧಿಕೃತರು ಜನಪ್ರತಿನಿಧಿಗಳು ಇದಕ್ಕೆ ತಕ್ಷಣವೇ ಸ್ಪಂದಿಸಿ, ನೂರಾರು ಕುಟುಂಬಗಳನ್ನು ಜಪ್ತಿ ಕ್ರಮದಿಂದ ರಕ್ಷಿಸಬೇಕಾಗಿದೆ.

.jpg)
