ಬದಿಯಡ್ಕ: ವಿದ್ಯಾಗಿರಿಯಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಬೆಳ್ಳಿ ಛಾಯಾಚಿತ್ರ ಪ್ರತಿಷ್ಠೆ ಇಂದು ಬೆಳಗ್ಗೆ 11ರಿಂದ 11.30ರ ಒಳಗೆ ಕುಂಭಲಗ್ನ ಶುಭ ಮುಹೂರ್ತದಲ್ಲಿ ಜರಗಲಿದೆ. ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಬೆಳಗ್ಗೆ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಿಂದ ಬದಿಯಡ್ಕ ಪೇಟೆಯಾಗಿ ವಿದ್ಯಾಗಿರಿಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯೊಂದಿಗೆ ಉಗ್ರಾಣ ತುಂಬಿಸುವ ಕಾರ್ಯಕ್ರಮದಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಸಂಜೆ ವೇದಮೂರ್ತಿ ಗಣೇಶ್ ಭಟ್ ಮುಂಡೋಡು ಇವರ ಆಗಮನ, ವಿವಿಧ ಭನಾ ಸಂಘಗಳಿಂದ ಭಜನೆ ನಡೆಯಿತು. ರಾತ್ರಿ ದೇವತಾ ಪ್ರಾರ್ಥನೆ, ಆಚಾರ್ಯವರಣ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ಅಸ್ತ್ರಕಲಶ ಪೂಜೆ, ವಾಸ್ತುಕಲಶ ಪೂಜೆ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹ, ವಾಸ್ತು ಬಲಿ, ಸ್ಥಳ ಶುದ್ಧಿ, ಅನ್ನದಾನ ನಡೆಯಿತು.




