ಬದಿಯಡ್ಕ: ಪಿಲಾಂಕಟ್ಟೆ ಸಮೀಪದ ಚೋಕೆಪಾರೆಯ ಶ್ರೀ ರಾಜಗುಳಿಗ ಸನ್ನಿಧಿಯ ಚೋಕೆಪಾರೆದ ಶ್ರೀ ರಾಜಗುಳಿಗ ತುಳು ಭಕ್ತಿ ಆಲ್ಪಂ ಹಾಡು ಬಿಡುಗಡೆ ಮಂಗಳವಾರ ಶ್ರೀ ಸನ್ನಿಧಿಯಲ್ಲಿ ನಡೆಯಿತು.
ಅಂಜಲಿ ಕ್ರಿಯೇಷನ್ಸ್ ಬದಿಯಡ್ಕ ಅರ್ಪಿಸುವ ಉದನೇಶ್ವರ ಪ್ರಸಾದ್ ಮೂಲಡ್ಕ ಅವರ ಸಾಹಿತ್ಯದ ವೀಡಿಯೋ ಭಕ್ತಿಗೀತೆ ಧ್ವನಿ ಸುರುಳಿಯಲ್ಲಿ ವಸಂತ ಬಾರಡ್ಕ ಹಾಗೂ ರಮ್ಯಾ ಹಾಡಿದ್ದಾರೆ. ಇದನ್ನು ಶ್ರೀಧರಿಯಂ ಆಯುರ್ವೇದಿಕ್ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ಶ್ರೀದೇವಿ ಪ್ರಸಾದ್ ಮೂಲಡ್ಕ ನಿರ್ವಹಿಸಿದರು.
ಚೋಕೆಪಾರ ಶ್ರೀ ರಾಜ ಗುಳಿಗ ಸೇವಾ ಸಮಿತಿ ಅಧ್ಯಕ್ಷ ಗೋಪಾಲ ಪಡುಮೂಲೆ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಹಾಡುಗಾರ ವಸಂತ ಬಾರಡ್ಕ, ವಿದ್ಯಾಲಕ್ಷ್ಮೀ ಮೈಲ್‍ತೊಟ್ಟಿ, ಮಾವಿನಕಟ್ಟೆ ಶ್ರೀ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ವಿಶ್ವನಾಥ ಬಳ್ಳಪದವು, ಗುರುಸ್ವಾಮಿ ಭಾಸ್ಕರ ಪುರುಷ, ಕೇಳು ಮಣಿಯಾಣಿ, ಬಾಲಕೃಷ್ಣ ಮಣಿಯಾಣಿ, ಸದಾಶಿವ ಮೈಲ್‍ತೊಟ್ಟಿ, ದಾಮೋದರ ಮೈಲ್‍ತೊಟ್ಟಿ, ಗೋಪಾಲನ್ ಉಬ್ರಂಗಳ, ನಾರಾಯಣ, ಬಾಲಕೃಷ್ಣ, ರಾಘವೇಂದ್ರ, ಗಂಗಾಧರ ನಡುಮೂಲೆ, ಗೀತಾ ಮೈಲ್‍ತೊಟ್ಟಿ, ತಾರಾಕುಮಾರಿ ಮತ್ತಿತರರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಸೇವಾ ಸಮಿತಿ ವತಿಯಿಂದ ಉದನೇಶ್ವರ ಮೂಲಡ್ಕ, ವಸಂತ ಬಾರಡ್ಕ, ಶ್ರೀದೇವಿ ಪ್ರಸಾದ್, ವಿದ್ಯಾಲಕ್ಷ್ಮೀ ಇವರನ್ನು ಗೌರವಿಸಲಾಯಿತು.ಈ ಆಲ್ಬಂ ಹಾಡು ಗಾನತರಂಗ ಯೂಟ್ಯೂಬ್ ಚಾಲನೆಲ್‍ನಲ್ಲಿ ಲಭ್ಯವಿರುವುದು.




.jpg)
