ತಿರುವನಂತಪುರ: ಕೇರಳ ವಿಶ್ವವಿದ್ಯಾನಿಲಯದ ಸಂಸ್ಕøತ ವಿಭಾಗದ ಮೂರು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಲು ಇಂದು ಆಗಮಿಸಿದ್ದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಎಸ್‍ಎಫ್‍ಐ ಪ್ರತಿಭಟನೆ ನಡೆಸಿದೆ. ಪ್ರತಿಭಟನಾಕಾರರು ವಿಶ್ವವಿದ್ಯಾನಿಲಯಕ್ಕೆ ಮುತ್ತಿಗೆ ಹಾಕಿ ಸೆಮಿನಾರ್ ಹಾಲ್ ಹೊರಗೆ ಪ್ರತಿಭಟನೆ ನಡೆಸಿದರು.
ಭದ್ರತೆ ಒದಗಿಸಿದ್ದೇವೆ ಎಂದು ಹೇಳಿಕೊಂಡಿದ್ದ ಪೋಲೀಸರ ನೆರವಿನೊಂದಿಗೆ ಎಸ್‍ಎಫ್‍ಐ ವಿಶ್ವವಿದ್ಯಾಲಯದ ಪ್ರಧಾನ ಕಚೇರಿಯ ಗೇಟ್‍ನಿಂದ ಹಾರಿ ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣದ ಬಳಿ ತಲುಪಿದರು. ಈ ವೇಳೆ ಪೋಲೀಸರು ಸೆನೆಟ್ ಹಾಲ್‍ನ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿದರು. ಪೋಲೀಸರು ಎರಡು ಬಾರಿ ಜಲಫಿರಂಗಿ ಪ್ರಯೋಗಿಸಿದರೂ ಫಲಪ್ರದವಾಗಿಲ್ಲ.
ಯೂನಿವರ್ಸಿಟಿ ಕಾಲೇಜಿನಿಂದ ಆಗಮಿಸಿದ್ದ ಎಸ್‍ಎಫ್‍ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಜ್ಯಪಾಲರ ವಿರುದ್ಧ ಎಸ್‍ಎಫ್‍ಐ ಅಧಿಕಾರ ದುರುಪಯೋಗ ಮತ್ತು ಸಾಕಷ್ಟು ಅರ್ಹತೆ ಇಲ್ಲದ ವ್ಯಕ್ತಿಯನ್ನು ಸ್ವಂತವಾಗಿ ವಿಸಿ ನೇಮಿಸಿದೆ ಎಂದು ಆರೋಪಿಸಿದೆ.






