HEALTH TIPS

ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ವಾರ್ಷಿಕ ಧನುಸಂಕ್ರಮಣ ಮಹೋತ್ಸವ ಸಂಪನ್ನ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆದು ಬರುವ ಧನುಸಂಕ್ರಮಣ ಶ್ರೀಭೂತಬಲಿ ಉತ್ಸವ ಭಾನುವಾರ ಹಾಗೂ ಸೋಮವಾರಗಳಂದು ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು. 


ಭಾನುವಾರ ಬೆಳಗ್ಗೆ ಗಣಪತಿ ಹೋಮ, ವಿವಿಧ ಭಜನಾ ತಂಡಗಳಿಂದ ಭಜನೆ, ಏಕಾದಶ ರುದ್ರಾಭಿಷೇಕ, ನವಕಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ, ಶ್ರೀ ಶಿವಲಿ ಉತ್ಸವ ಅನ್ನಸಂತರ್ಪಣೆ ನಡೆಯಿತು. ಸಂಜೆ ದೀಪಾರಾಧನೆ, ತಾಯಂಬಕ, ಶ್ರೀ ರಂಗಪೂಜೆ, ರಾತ್ರಿ ಶ್ರೀ ದೇವರ ಉತ್ಸವ ಬಲ, ಬೆಡಿಸೇವೆ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಯಕ್ಷವಿಹಾರಿ ಬಳಗ ಬದಿಯಡ್ಕ ಇವರಿಂದ ಯಕ್ಷಗಾನ ತಾಳಮದ್ದಳೆ, ಕೃಷ್ಣಸಂಧಾನ, ಹಾಗೂ ಅಪರಾಹ್ನ ಮಾನ್ಯ ವಿಶ್ವನಾಥ ರೈ ಬಳಗದವರಿಂದ ಶರಸೇತು ಬಂಧನ, ಸಂಜೆ ಶ್ರೀ ಉದನೇಶ್ವರ ಕುಣಿತ ಭÀಜನಾ ಸಂಘದವರಿಂದ ಕುಣಿತ ಭಜನೆ, ರಂಗಸಿರಿ ಸಾಂಸ್ಕøತಿಕ ವೇದಿಕೆ ಬದಿಯಡ್ಕ ಸಂಗೀತ ವಿದುಷಿ ಗೀತಾ ಸಾರಡ್ಕ ಇವರ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ, ರಾತ್ರಿ ಶಿವಶಕ್ತಿ ಪೆರಡಾಲ ಪ್ರಾಯೋಜಕತ್ವದಲ್ಲಿ ಹಾರ್ಟ್ ಬೀಟ್ಸ್ ಪಯ್ಯನ್ನೂರು ಇವರಿಂದ ರಸಮಂಜರಿ ಜನಮನಸೂರೆಗೊಂಡಿತು. 

ಸೋಮವಾರ ಬೆಳಗ್ಗೆ ಶ್ರೀದೇವರ ಬಲಿ ಉತ್ಸವ, ಬಟ್ಟಲುಕಾಣಿಕೆ ರಾಜಾಂಗಣ ಪ್ರಸಾದ, ಮಂತ್ರಾಕ್ಷತೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries