HEALTH TIPS

ಕೃಷ್ಣನ್ ಕೆ.ಕೆ. ಸ್ವಾಮಿಕೃಪಾ ಅವರಿಗೆ ವೈದ್ಯರತ್ನ ಪ್ರಶಸ್ತಿ ಪ್ರದಾನ

ಬದಿಯಡ್ಕ: ಹೈದರಾಬಾದ್ ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ ಬಹುಜನ ಸಾಹಿತ್ಯ ಅಕಾಡೆಮಿ ವತಿಯಿಂದ ನೀಡಲಾಗುವ ವೈದ್ಯರತ್ನ ದೇಶೀಯ ಪ್ರಶಸ್ತಿಗೆ ಭಾಜನರಾದ ಬದಿಯಡ್ಕ ಕನ್ನೆಪ್ಪಾಡಿ ಸ್ವಾಮಿಕೃಪಾ ತರವಾಡಿನ ಕೃಷ್ಣನ್ ಕೆ.ಕೆ.. ಅವರಿಗೆ ಬಿಎಸ್‍ಎ ಅಖಿಲ ಭಾರತ ಅಧ್ಯಕ್ಷ ನಲ್ಲ ರಾಧಾಕೃಷ್ಣನ್ ಅವರು ವೈದ್ಯರತ್ನ ರಾಷ್ಟ್ರೀಯ ಪ್ರಶಸ್ತಿ 2024ನ್ನು ಪ್ರದಾನ ಮಾಡಿದರು. 

ನವದೆಹಲಿ ಲೋ ಆಂದ್ರಭವನ್ ಆಡಿಟೋರಿಯಂನಲ್ಲಿ ಇತ್ತೀಚೆಗೆ ನಡೆದ 17ನೇ ದೇಶೀಯ ಸಮಾವೇಶದಲ್ಲಿ ಕೇಂದ್ರ ಸಾಮಾಜಿಕ ಕಲ್ಯಾಣ ಇಲಾಖಾ ಸಚಿವ ಮುಖೇಶ್ ಕುಮಾರ್ ಅಹ್ಲಾವತ್ ಜಿ ಉಪಸ್ಥಿತರಿದ್ದರು. ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಕೃಷ್ಣನ್ ಕೆ.ಕೆ. ಅವರು ನೀಡಿದ ಆಯುರ್ವೇದ ಔಷಧಗಳಿಂದ ಅನೇಕರು ರೋಗಮುಕ್ತರಾಗಿದ್ದರು. ಇತ್ತೀಚೆಗೆ ಚಿತ್ರದುರ್ಗದಲ್ಲಿ ನಾಡಿಪರೀಕ್ಷೆ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ್ದರು. ಮೊಗೇರ ಸರ್ವೀಸ್ ಸೊಸೈಟಿ, ಕನ್ನೆಪ್ಪಾಡಿ ಕೊಡ್ಯಮೆ ಅಂತಲ ಮೊಗೇರ ಚಾವಡಿಯ ಪದಾಧಿಕಾರಿಯಾಗಿಯೂ ಇವರು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries