HEALTH TIPS

ಕೊಂಡೆವೂರಿನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ, ಆಯುರ್ವೇದಿಕ್ ಚಿಕಿತ್ಸಾ ಶಿಬಿರ

ಉಪ್ಪಳ: ಕೊಂಡೆವೂರಿನ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ ನ ಆಶ್ರಯದಲ್ಲಿ  ಒನ್‍ಸೈಟ್ ಎಸ್ಸಿಲೋರ್ ಲುಕ್ಷೋಟಿಕಾ ಫೌಂಡೇಶನ್ ಬೆಂಗಳೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ,ಕಾಸರಗೋಡು ಮತ್ತು ಮಂಗಳೂರು, ಡಾ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಹಾಗೂ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ತಲಪಾಡಿ ಮಂಗಳೂರು ಇವರ ಸಹಯೋಗದೊಂದಿಗೆ "ಕೊಂಡೆವೂರು ಮಠದಲ್ಲಿ ಪ್ರತೀ ತಿಂಗಳು  ನಡೆಯುವ ಉಚಿತ ಆಯುರ್ವೇದಿಕ್ ಚಿಕಿತ್ಸಾ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಭಾನುವಾರ ನಡೆಯಿತು. ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ  ದಿವ್ಯ ಸಾನ್ನಿಧ್ಯದಲ್ಲಿ, ಮಂಗಳೂರಿನ ಪ್ರಸಾದ್ ನೇತ್ರಾಲಯದ ಅಧ್ಯಕ್ಷ ಡಾ. ಗುರುಪ್ರಸಾದ್ ಮಂಗಳೂರು ಇವರ ಅಧ್ಯಕ್ಷತೆಯಲ್ಲಿ ಜರಗಿತು. ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ ಪುರಾಣಿಕ್ ದೀಪ ಪ್ರಜ್ವಲನೆಗೈದು ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳಿಗೆ ಎಳೆಯ ಪ್ರಾಯದಲ್ಲಿಯೇ ಧಾರ್ಮಿಕ ಶಿಕ್ಷಣ ನೀಡಿ ಸಂಸ್ಕಾರಯುತವಾಗಿ ಬೆಳೆಯುವಂತೆ ಮಾಡಬೇಕು. ನಮ್ಮ ದೇಹ ಪ್ರಕೃತಿಗೆ ಅನುಗುಣವಾಗಿ ಸುಶ್ರೂಷೆ ನೀಡುವಂತಹ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಾರಿಗೊಳಿಸಿದ್ದಾರೆ, ಇದರ ಸದುಪಯೋಗ ಪಡೆದು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳೋಣ ಎಂದು ಹೇಳಿದರು. 


ಡಾ. ಸಂದೀಪ್ ಬೇಕಲ್ ಆರ್( ಪ್ರಾಂಶುಪಾಲರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು,ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ತಲಪಾಡಿ ಮಂಗಳೂರು) ಡಾ. ಲಿಖಿತ್, ರೈ.(ಜನರಲ್ ಸರ್ಜನ್ ಕಣಚೂರು ಮೆಡಿಕಲ್ ಕಾಲೇಜು,) ಡಾ. ವಿವೇಕ್ ಜೆ(ಬಿ.ಎ.ಎಮ್.ಎಸ್,ಎಮ್.ಎಸ್(ಆಯು)ಡಿವಿಪಿ ಪಿಹೆಚ್‍ಡಿ ಆಯುರ್ವೇದ ಶಸ್ತ್ರಚಿಕಿತ್ಸಕರು ಮತ್ತು ಕ್ಯಾನ್ಸರ್ ತಜ್ಞರು) ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ ಆರ್ ಜಯಾನಂದ ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.  ಶಶಿಧರ ಶೆಟ್ಟಿ ಗ್ರಾಮಚಾವಡಿ  ಉಪಸ್ಥಿತರಿದ್ದರು. ಪರಮಪೂಜ್ಯ ಗುರೂಜಿಯವರು ಆಶ್ರಮದ ವತಿಯಿಂದ ನಡೆಸಿದ ಮೆಡಿಕಲ್ ಕ್ಯಾಂಪ್ ಗೆ ಸಹಕರಿಸಿದ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿ, ಪ್ರತಿಯೊಬ್ಬರು ದೇವರ ಪ್ರೀತಿ ಸಂಪಾದನೆ ಮಾಡಬೇಕು ಅದಕ್ಕಾಗಿ ದೇವರ ಸ್ಮರಣೆ ಮಾಡಬೇಕು . ಜಗತ್ತನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಜೀವರಾಶಿಗಳನ್ನು ರಕ್ಷಣೆ ಮಾಡುವ ಮೂಲಕ ಸುಂದರ ಪರಿಸರ ನಿರ್ಮಾಣ ಮಾಡಬೇಕು, ಹಸುವನ್ನು ಸಾಕುವ ಮೂಲಕ ಸಾವಯವ ಕೃಷಿಯತ್ತ ಮನಮಾಡಬೇಕು, ನಮ್ಮ ದೇಹ ಪ್ರಕೃತಿಗೆ ಅನುಗುಣವಾಗಿ ಆಹಾರ ಸೇವಿಸಬೇಕು ಎಂದು ಕರೆನೀಡಿದರು. ಆ. 26 ರಂದು ಜರಗುವ ವಿಷ್ಣುಸಹಸ್ರನಾಮ ಅಭಿಯಾನದಲ್ಲಿ ಭಾಗವಹಿಸುವಂತೆ ಶ್ರೀಗಳು ಸೂಚಿಸಿದರು.


ಕೆ ಎಂ ಗಂಗಾಧರ್ ಸ್ವಾಗತಿಸಿ, ವಂದಿಸಿದರು. ಮಲ್ಲಿಕಾ ಮಾತಾಶ್ರೀ ಕಾರ್ಯಕ್ರಮ ನಿರೂಪಿಸಿದರು.  320 ಕ್ಕೂ ಅಧಿಕ ಜನರು ಉಚಿತ ನೇತ್ರ ತಪಾಸಣಾ  ಶಿಬಿರ ಮತ್ತು  154 ಜನರು ಆಯುರ್ವೇದಿಕ್ ಚಿಕಿತ್ಸಾಶಿಬಿರದ ಪ್ರಯೋಜನವನ್ನು ಪಡೆದರು. ಅಗತ್ಯವುಳ್ಳ 40 ಮಂದಿಗೆ ಕಣ್ಣಿನ  ಶಸ್ತ್ರ ಚಿಕಿತ್ಸೆಗಾಗಿ ಪ್ರಸಾದ್ ನೇತ್ರಾಲಯದಲ್ಲಿ ಉನ್ನತ ತಪಾಸಣೆಗಾಗಿ ಕೊಂಡೆವೂರು ಮಠಕ್ಕೆ ಆಗಮಿಸುವಂತೆಯೂ  204 ಮಂದಿಗೆ ಉಚಿತ ಕನ್ನಡಕ ವಿತರಿಸಲಾಗುವುದೆಂದು ಸೂಚಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries