ಉಪ್ಪಳ : ಖ್ಯಾತ ಭಾಗವತ ಪಟ್ಲ ಸತೀಶ ಶೆಟ್ಟಿಯವರ ನೇತೃತ್ವದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಯಕ್ಷಗಾನ ಕಲಾವಿದರ ಆಪತ್ತಿನಲ್ಲಿ ಕೈಜೋಡಿಸುತ್ತ ಸದಾ ನೆರವೀಯುತ್ತಿದೆ. ಕಲಾವಿದರಿಗೆ ಜೀವ ವಿಮಾ, ಅಶಕ್ತ ಕಲಾವಿದರಿಗೆ ಸಹಾಯ, ಗೃಹ ನಿರ್ಮಾಣದಂತಹ ಕಾರ್ಯಗಳಲ್ಲಿ ತೊಡಗಿಗೊಂಡಿರುವುದು ದೊಡ್ಡ ಕಾರ್ಯ. ಫೌಂಡೇಶನ್ ಇನ್ನಷ್ಟು ಕಲಾವಿದರ ಬದುಕಿಗೆ ಬೆಳಕಾಗಲಿ, ಟ್ರಸ್ಟ್ ಕಾರ್ಯಕ್ಕೆ ಸಮಾಜ ಉತ್ತಮರೀತಿಯಲ್ಲಿ ಸ್ಪಂದಿಸಲಿ ಎಂದು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮ ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಶ್ರೀಗಳು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಉಪ್ಪಳ ಘಟಕದ ವಾರ್ಷಿಕೋತ್ಸವ ಆಮಂತ್ರಣ ಪತ್ರಿಕೆಯನ್ನುಭಾನುವಾರ ಕೊಂಡೆವೂರು ಶ್ರೀ ಮಠದಲ್ಲಿ ಬಿಡುಗಡೆ ಗೊಳಿಸಿ ಆಶೀರ್ವದಿಸಿ ಮಾತನಾಡಿದರು.
ಜ.12 ರಂದು ಕುಳೂರಿನ ಶ್ರೀಹರಿ ಭಜನಾ ಸಂಘದಲ್ಲಿ ವಾರ್ಷಿಕೋತ್ಸವ ಜರಗಲಿದೆ.
ಉಪ್ಪಳ ಘಟಕದ ಅಧ್ಯಕ್ಷÀ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ, ಗೌರವಾಧ್ಯಕ್ಷ ಪಿ. ಆರ್.ಶೆಟ್ಟಿ ಪೊಯ್ಯೆಲು, ಪದ್ಮನಾಭ ಭಂಡಾರಿ ಮುಳಿಂಜ, ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಅರವಿಂದಾಕ್ಷ ಭಂಡಾರಿ ದಡ್ಡಂಗಡಿ ಉಪಸ್ಥಿತರಿದ್ದರು. ಉಪ್ಪಳ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.ಸಂಚಾಲಕ ಯೋಗೀಶ ರಾವ್ ಚಿಗುರುಪಾದೆ ಕಾರ್ಯಕ್ರಮ ನಿರ್ವಹಿಸಿದರು.

.jpg)
