ಬದಿಯಡ್ಕ : ಮಧೂರು ಶ್ರೀ ಮದನಂತೇಶ್ವರ ದೇವರ ಮೂಲಸ್ಥಾನ ಉಳಿಯತ್ತಡ್ಕದಲ್ಲಿ ಗೋಶಾಲೆ ಸ್ಥಾಪಿಸಬೇಕೆಂದು ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜವು ಮಲಬಾರ್ ದೇವಸ್ವಂ ಮಂಡಳಿ ಆಯುಕ್ತರಿಗೆ ಮನವಿ ಸಲ್ಲಿಸಲಿದೆ. ಈ ಕುರಿತು ಬದಿಯಡ್ಕದಲ್ಲಿ ನಡೆದ ಸಮಾಜದ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಉಳಿಯತ್ತಡ್ಕ ಮೂಲ ಸ್ಥಾನವು ವಿಶಾಲವಾದ ಸ್ಥಳ ಮತ್ತು ಜಲ ಸಮೃದ್ಧಿಯ ಪ್ರದೇಶವಾಗಿದೆ. ಗೋಶಾಲೆ ಸ್ಥಾಪಿಸಿದರೆ ದೇವಸ್ಥಾನಕ್ಕೂ ಆದಾಯ ಬರುವ ಸಾಧ್ಯತೆಯಿದೆ. ಈ ಕುರಿತು ಸರ್ಕಾರದ ಕೃಷಿ ಇಲಾಖೆಯ ಗಮನ ಸೆಳೆಯಲು ಮತ್ತು ಮಾಯಿಪ್ಪಾಡಿ ರಾಜರನ್ನು ಭೇಟಿಯಾಗಲು ನಿರ್ಧರಿಸಲಾಯಿತು.
ಮೂಲಸ್ಥಾನದಲ್ಲಿ ಔಷಧೀಯ ಸಸ್ಯವನ ಸ್ಥಾಪಿಸಲು ಮತ್ತು ಕೆರೆ ದುರಸ್ತಿಗೊಳಿಸಲು ಮದರು ಮಹಾಮಾತೆ ಮೊಗೇರ ಸಮಾಜ ಈ ಹಿಂದೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿತ್ತು.
ಬದಿಯಡ್ಕದಲ್ಲಿ ಜರಗಿದ ಸಭೆಯ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ವಸಂತ ಅಜಕ್ಕೋಡು ವಹಿಸಿದ್ದರು. ಗೌರವಾಧ್ಯಕ್ಷ ಆನಂದ ಕೆ.ಮವ್ವಾರ್ ವಿಷಯ ಪ್ರಸ್ತಾಪಿಸಿದರು. ಗೌರವ ಸಲಹೆಗಾರರಾದ ರಾಮಪ್ಪ ಮಂಜೇಶ್ವರ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಉಪಾಧ್ಯಕ್ಷ ಸುರೇಶ್ ಅಜಕ್ಕೋಡು, ಕೋಶಾಧಿಕಾರಿ ಡಿ.ಕೃಷ್ಣದಾಸ್, ಗೋಪಾಲ ಡಿ, ಅನಿಲ್ ಅಜಕ್ಕೋಡು ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶಂಕರ ಡಿ.ದಬೆರ್Éತ್ತಡ್ಕ ಸ್ವಾಗತಿಸಿ,.ಜೊತೆ ಕಾರ್ಯದರ್ಶಿ ಸುಧಾಕರ ಬೆಳ್ಳಿಗೆ ವಂದಿಸಿದರು.

