ಬದಿಯಡ್ಕ: ಕಾಸರಗೋಡು ಜನರಲ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಜನಾರ್ದನ ನಾಯ್ಕ್ ಅವರಿಗೆ ಜೆರಿಯಾಟ್ರಿಕ್ ಸೊಸೈಟಿ ಆಫ್ ಇಂಡಿಯದ ಫೆಲೋಶಿಫ್ ಪುರಸ್ಕಾರ ಲಭಿಸಿದೆ. ವೃದ್ಧಾಪ್ಯ ವೈದ್ಯಕೀಯ ಶಾಸ್ತ್ರದ ಏಕೈಕ ಶೈಕ್ಷಣಿಕ ಸೊಸೈಟಿಯಾಗಿರುವ, ಜೆರಿಯಾಟ್ರಿಕ್ ಸೊಸೈಟಿ ಆಫ್ ಇಂಡಿಯದ ಅಧ್ಯಕ್ಷ ಡಾ. ಸಜೇಶ್ ಅಶೋಕನ್ ಅವರು ಪೆಲೋಶಿಫ್ ಪುರಸ್ಕಾರವನ್ನು ಎರ್ನಾಕುಳಂನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನ ಮಾಡಿದರು.
ಡಾ.ಜನಾರ್ದನ ಅವರು ಈ ಹಿಂದೆ ಕಾಲೇಜ್ ಆಫ್ ಜನರಲ್ ಪ್ರಾಕ್ಟೀನರ್ಸ್ ಮತ್ತು ಅಕಾಡೆಮಿ ಆಫ್ ಮೆಡಿಕಲ್ ಸ್ಪೆಷಾಲಿಟಿಯಿಂದಲೂ ಫೆಲೋಶಿಪ್ ಗಳನ್ನು ಪಡೆದಿದ್ದರು. ಮಾನ್ಯ ಸಮೀಪದ ಚುಕ್ಕಿನಡ್ಕ ನಿವಾಸಿಯಾಗಿರುವ ಡಾ.ಜನಾರ್ದನ ಅವರು ಮಾನ್ಯ ಜ್ಞಾನೋದಯ ಶಾಲೆ ಮತ್ತು ಬದಿಯಡ್ಕ ನವಜೀವನ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು, ಎಂಬಿಬಿಎಸ್ ಮತ್ತು ಎಂಡಿಯನ್ನು ಕಲ್ಲಿಕೋಟೆಯ ವೈದ್ಯಕೀಯ ಕಾಲೇಜಿನಲ್ಲಿ ಪೂರ್ತಿಗೊಳಿಸಿದ ಇವರು, ಕೊಚ್ಚಿ ಅಮೃತ ಕಾಲೇಜಿನಿಂದ ವೃದ್ಧಾಪ್ಯ ವೈದ್ಯಕೀಯ ಶಾಸ್ತ್ರವನ್ನೂ, ವೆಲ್ಲೊರಿನ ಕೃಶ್ಚಿಯನ್ ಮೆಡಿಕಲ್ ಕಾಲೇಜಿನಿಂದ ಎಚ್ ಐ ವಿ ಯ ಬಗ್ಗೆ ತಜ್ಞ ತರಬೇತಿಯನ್ನು ಪಡೆದಿದ್ದಾರೆ.
ಕಾಸರಗೋಡಿನ ಜನರಲ್ ಆಸ್ಪತ್ರೆಯಲ್ಲಿ ಪಿಸಿಶಿಯನ್ ಆಗಿ ಕೆಲಸ ಮಾಡುವ ಡಾ.ಜನಾರ್ದನ ಅವರು ಉತ್ತಮ ಸಂಚಾಲಕರಾಗಿ ಸಾಂಸ್ಕøತಿಕ, ಸಾಮಾಜಿಕ ಕ್ಷೇತ್ರದಲ್ಲೂ ಸಕ್ರೀಯ ರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

.jpg)
.jpg)
